ತಮಿಳ್ನಾಡು: ಕನ್ಹಯ್ಯಾರನ್ನು ಬೆಂಬಲಿಸಿದ ಜಾನಪದ ಹಾಡುಗಾರ ಕೋವನ್ ಬಂಧನ
Update: 2016-02-19 19:11 IST
ಚೆನ್ನೈ,ಫೆ19: ಜೆಎನ್‌ಯು ವಿದ್ಯಾರ್ಥಿ ಯೂನಿಯನ್ ನಾಯಕ ಕನ್ಹಯ್ಯಾಕುಮಾರ್‌ರನ್ನು ಅನ್ಯಾಯವಾಗಿ ಬಂಧಿಸಿ ಥಳಿಸಲ್ಪಟ್ಟಿದ್ದನ್ನು ಪ್ರತಿಭಟಿಸಿದ ಸಾಮಾಜಿಕ ಕಾರ್ಯಕರ್ತ ಜಾನಪದಹಾಡುಗಾರ ಕೋವನ್‌ರನ್ನು ತಮಿಳ್ನಾಡು ಪೊಲೀಸ್ ಗುರುವಾರ ಬಂಧಿಸಿದೆ. ಗುರುವಾರ ಗುಂಕಪಕ್ಕದ ಶಾಸ್ತ್ರಿ ಭವನದಲ್ಲಿ ಪ್ರತಿಭಟನೆ ಮಾಡಿದ ಕೋವನ್ ಸಹಿತ ಹದಿನೈದು ಮಂದಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಕನ್ಹಯ್ಯ ಕುಮಾರ್‌ರನ್ನು ಬಿಡುಗಡೆಗೊಳಿಸಿರಿ, ಎಲ್ಲ ವಿದ್ಯಾಸಂಸ್ಥೆಗಳಲ್ಲಿ ಎಬಿವಿಪಿಯನ್ನು ನಿಷೇಧಿಸಿರಿ ಮುಂತಾದ ಬೇಡಿಕೆಯನ್ನು ಕೋವನ್ ಮುಂದಿಟ್ಟು ಪ್ರತಿಭಟಿಸುತ್ತಿದ್ದರು. ಕಲಾಸಾಂಸ್ಕೃತಿ ಸಂಘಟನೆಯಾದ ಮಕ್ಕಳ್ ಕಲೈಇಲಕ್ಕಿಯ ಕಯಗಂ, ರೆವೆಲ್ಯುಷನರಿ ಸ್ಟೂಡೆಂಟ್ಸ್ ಯೂತ್ ಫ್ರಂಟ್ ಎಂಬಸಂಘಟನೆಗಳ ಕಾರ್ಯಕರ್ತರನ್ನು ಕೋವನ್‌ಜೊತೆ ಬಂಧಿಸಲಾಗಿದೆ. ತಮಿಳ್ನಾಡು ಮುಖ್ಯಮಂತ್ರಿಜಯಲಲಿತಾ ಮತ್ತು ಕೇಂದ್ರ ಸರಕಾರವನ್ನು ಟೀಕಿಸಿ ಹಾಡು ಹಾಡಿದ್ದಕ್ಕಾಗಿ ತಮಿಳ್ನಾಡು ಪೊಲೀಸ್ ಈ ಮೊದಲು ಬಂದಿಸಿತ್ತು.