ಶಿರ್ತಾಡಿ ಜಿ.ಪಂ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಸುಮಿತ್ರಾಗೆ ಸ್ವ ಕ್ಷೇತ್ರದಲ್ಲಿ ಮತದಾನದ ಹಕ್ಕಿಲ್ಲ

Update: 2016-02-19 14:24 GMT

ಮೂಡುಬಿದಿರೆ : ಶಿರ್ತಾಡಿ ಜಿ.ಪಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಮಿತ್ರಾ ಎಸ್.ಪಾಂಡ್ರು ಅವರಿಗೆ ತಾನು ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸ್ವ ಕ್ಷೇತ್ರವಾದ ಅಳಿಯೂರಿನಲ್ಲಿ ಮತದಾನದ ಹಕ್ಕಿಲ್ಲವೆಂದು ತಿಳಿದು ಬಂದಿದೆ.  ಸುಮಿತ್ರಾ ಅವರ ಹುಟ್ಟೂರು ಧರ್ಮಸ್ಥಳದವಾಗಿದ್ದು ಕಳೆದ 5 ವರ್ಷಗಳ ಹಿಂದೆ ಅವರು ಸಾಮಾಜಿಕ ಹೋರಾಟಗಾರ ಅಳಿಯೂರಿನ ಶಿವಾನಂದ ಪಾಂಡ್ರು ಅವರನ್ನು ಮದುವೆಯಾಗಿ ಬಂದಿದ್ದರು. ಆದರೆ ತನ್ನ ಹುಟ್ಟೂರಿನಲ್ಲಿರುವ ವಾಸ ಸ್ಥಳ, ಓಟರ್ ಐಡಿಯ ದಾಖಲೆಗಳನ್ನು ಅಳಿಯೂರಿಗೆ ವರ್ಗಾವಣೆಗೊಳಿಸದ ಕಾರಣ ಅವರು ತಾನು ಸ್ಪರ್ಧಿಸುತ್ತಿರುವ ಶಿರ್ತಾಡಿ ಕ್ಷೇತ್ರದಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಮೂಲಕ ತನಗೆ ಹಾಕಬೇಕಾದ ಒಂದು ಮತದಿಂದ ವಂಚಿತರಾಗಿ ಧರ್ಮಸ್ಥಳದ ಜಿ.ಪಂ ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ.

ಸುಮಿತ್ರಾ ಎಸ್.ಪಾಂಡ್ರು ಅವರು ತನ್ನ ಹೆತ್ತವರಿಗೆ ಒಬ್ಬಳೇ ಮಗಳಾಗಿರುವುದರಿಂದ ತನಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಅಳಿಯೂರಿಗೆ ವರ್ಗಾವಣೆಗೊಳಿಸಿಲ್ಲವೆಂದು ಸುಮಿತ್ರಾ ಅವರ ಪತಿ ಶಿವಾನಂದ ಪಾಂಡ್ರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News