×
Ad

ವಿದೇಶಿ ವಿನಿಮಯ ಕಾಯ್ದೆ ಸರಳೀಕರಣಕ್ಕೆ ಚಿಂತನೆ: ಪಾಂಡೆ

Update: 2016-02-19 20:23 IST

ಮಣಿಪಾಲ, ಫೆ.19: ಸಾಕಷ್ಟು ಕ್ಲಿಷ್ಟಕರ ಹಾಗೂ ಗೊಂದಲಮಯವಾಗಿರುವ ವಿದೇಶಿ ವಿನಿಮಯ ಕಾಯಿದೆಯ ಸರಳೀಕರಣ ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ರಿಸರ್ವ್ ಬ್ಯಾಂಕ್ ಆ್ ಇಂಡಿಯಾದ ಮುಂಬಯಿಯ ಕೇಂದ್ರ ಕಚೇರಿಯ ಮುಖ್ಯ ಮಹಾಪ್ರಬಂಧಕ ಎ.ಕೆ.ಪಾಂಡೆ ಹೇಳಿದ್ದಾರೆ.

 ಬೆಂಗಳೂರಿನ ರಿಸರ್ವ್ ಬ್ಯಾಂಕ್ ಆ್ ಇಂಡಿಯಾದ ವಿದೇಶಿ ವಿನಿಮಯ ವಿಭಾಗದ ವತಿಯಿಂದ ಹಣಕಾಸಿನ ಸಾಕ್ಷರತಾ ಕಾರ್ಯಕ್ರಮದ ಅಂಗವಾಗಿ ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ಗೋಲ್ಡನ್ ಜ್ಯುಬಿಲಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ವಿದೇಶಿ ವಿನಿಮಯ ಕಾಯಿದೆ ಕುರಿತು ಜನರಿಗೆ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ವಿದೇಶಿ ವಿನಿಮಯದ ನಿಯಂತ್ರಣಕ್ಕಾಗಿ ಈ ಕಾಯಿದೆಯನ್ನು ಜಾರಿಗೆ ತರ ಲಾಗಿತ್ತಾದರೂ ಅದಕ್ಕೆ ಸಂಬಂಸಿದಂತೆ ಈವರೆಗೆ ಸುಮಾರು 300ಕ್ಕೂ ಅಕ ಸುತ್ತೋಲೆಗಳನ್ನು ಹೊರಡಿಸಲಾಗಿದೆ. ಇದರಿಂದ ಈ ಕಾಯಿದೆ ತೀರಾ ಸಂಕೀರ್ಣ ಹಾಗೂ ಕ್ಲಿಷ್ಟಕರವಾಗಿದೆ ಎಂದು ಅವರು ತಿಳಿಸಿದರು.

ವಿದೇಶಿ ವಿನಿಮಯದ ನಿರ್ವಹಣೆ ಹಾಗೂ ನಿಯಂತ್ರಣದ ಜವಾಬ್ದಾರಿ ಆರ್‌ಬಿಐ ಮೇಲಿದ್ದು, ಈ ಕಾಯಿದೆಯಲ್ಲಿನ ಗೊಂದಲದಿಂದಾಗಿ ಆರ್‌ಬಿಐ ಇಂದು ಸಮಲೋಚಕ ಸಂಸ್ಥೆಯಾಗಿ ಮಾರ್ಪಟ್ಟಿದೆ. ಆದುದರಿಂದ ಈ ಕಾಯ್ದೆ ಸರಳೀಕರಣ ಅನಿವಾರ್ಯವಾಗಿದೆ. ಇದರಿಂದ ಭಾರತದ ಮಾರುಕಟ್ಟೆಯಲ್ಲಿ ವ್ಯವಹಾರ ಹೆಚ್ಚಾಗುತ್ತದೆ. ಅದೇರೀತಿ ವಹಿವಾಟುಗಳನ್ನು ಇನ್ನಷ್ಟು ಏರಿಕೆ ಮಾಡಲು ಹಲವು ಸುಧಾರಣಾ ಕ್ರಮಗಳ ಅಗತ್ಯವಾಗಿದೆ ಎಂದರು.

ಈ ಕಾಯಿದೆ ವ್ಯವಹಾರ ಹಾಗೂ ಜನತೆಗೆ ಸಂಬಂಸಿರುವ ಕಾಯಿದೆ ಯಾಗಿರುವುದರಿಂದ ದ್ವಿಮುಖ ಸಂವಹನ ಏರ್ಪಡಿಸುವುದು ಮುಖ್ಯವಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಜನಾಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಆರ್‌ಬಿಐ ತೆಗೆದುಕೊಳ್ಳುವ ನಿರ್ಧಾರಗಳು ಜನರ ಮೇಲೆ ನೇರ ಪರಿಣಾಮ ಬೀರುವುದರಿಂದ ಜನರ ಸಂಪರ್ಕವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ರಿಸರ್ವ್ ಬ್ಯಾಂಕ್ ಆ್ ಇಂಡಿಯಾ ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಇ.ಇ.ಕರ್ತಕ್ ಮಾತನಾಡಿ, ವಿದೇಶಗಳಲ್ಲಿ ವಿವಿಧ ಕಾರಣಗಳನ್ನು ಹೇಳಿ ಭಾರತೀಯರನ್ನು ಮೋಸಗೊಳಿಸುವ ಜಾಲವಿದ್ದು, ಈ ಬಗ್ಗೆ ಬಹಳಷ್ಟು ಎಚ್ಚರ ವಹಿಸಬೇಕಾಗಿದೆ. ಅದೇ ರೀತಿ ಎಟಿಎಂ ಕಾರ್ಡಿನ ಪಿನ್ ನಂಬರ್ ಪಡೆಯುವುದು, ಇಂಟರ್ನೆಟ್ ಸಂದೇಶಗಳ ಮೂಲಕ ಆಮಿಷಗಳನ್ನು ನೀಡಿ ಮೋಸ ಮಾಡಲಾಗುತ್ತಿದೆ. ಇಂತಹ ಮೋಸಕ್ಕೆ ಹೆಚ್ಚಾಗಿ ಬಲಿಯಾಗುವುದು ವಿದ್ಯಾವಂತರುಗಳೇ ಎಂಬುದು ವಿಪರ್ಯಾಸ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News