ಪುಚ್ಚೆಮೊಗರು : ಮಾ.6ಕ್ಕೆ ಎಲಿಯ ಮಸೀದಿಯ ಉರೂಸ್

Update: 2016-02-19 15:42 GMT

ಮೂಡುಬಿದಿರೆ: ಐತಿಹಾಸಿಕ ಹಿನ್ನೆಲೆಯ ಪುಚ್ಚೆಮೊಗರು ಗ್ರಾಮದ ಎಲಿಯ ಜುಮ್ಮಾ ಮಸೀದಿಗೆ ಸೈಯ್ಯದ್ ಡಾಕ್ಟರ್ ಅಬೂಬಕ್ಕರ್ ವಲಿಯುಲ್ಲಾಹಿ ಹೆಸರಿನಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಮುಖಾಂ ಉರೂಸು ಮಾರ್ಚ್ 6ರಂದು ನಡೆಯಲಿದೆ ಎಂದು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಪ್ ಮದರ್ ಇಂಡಿಯಾ ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮಾಂತರ ಪ್ರದೇಶದಲ್ಲಿರುವ ಎಲಿಯ ಮಸೀದಿಗೆ 800 ವರ್ಷಗಳ ಇತಿಹಾಸವಿದೆ. ಕಳೆದ 30 ವರ್ಷಗಳಿಂದ ಇಲ್ಲಿ ಉರೂಸ್ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದೇವೆ. ಮುಸ್ಲಿಂರು ಮಾತ್ರವಲ್ಲ ಎಲ್ಲ ಧರ್ಮೀಯರು ಈ ಕ್ಷೇತ್ರಕ್ಕೆ ಭೇಟಿ ನೀಡಿ ಹರಕೆ ಸಲ್ಲಿಸಿ ಪ್ರಾರ್ಥನೆ ಮಾಡುವುದರಿಂದ ಇದು ಸಾಮರಸ್ಯದ ಶ್ರದ್ಧಾ ಕೇಂದ್ರವಾಗಿದೆ ಎಂದರು.

ಮಾರ್ಚ್ 6ರಂದು ಸಂಜೆ ಸ್ಥಳೀಯ ಖತೀಬರಾದ ಬಿ.ಕೆ ಅಲ್ತಾಫ್ ಅಧ್ಯಕ್ಷತೆಯಲ್ಲಿ ನಡೆಯು ಉರೂಸ್ ಕಾರ್ಯಕ್ರಮವನ್ನು ದ.ಕ ಜಿಲ್ಲಾ ಖಾಝಿ ಶೈಖುನಾ ತ್ವಾಖ ಉದ್ಘಾಟಿಸಲಿದ್ದಾರೆ. ಪ್ರಸಿದ್ಧ ಮತಪಂಡಿತ ಸಯ್ಯದ್ ಆಲಿ ತಂಙಳ್ ಕುಂಬೋಳ್, ಕೆ.ಐ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಮತ್ತಿತರ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಜಮಾತ್ ಪ್ರಮುಖರಾದ ಯೂಸೂಫ್ ಮಿಜಾರು, ಅಬ್ದುಲ್ ಖಾದರ್ ಮತ್ತು ಉಮರಬ್ಬ ಪತ್ರಿಕಗೋಷ್ಠಿಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News