ಏಷ್ಯಾ ಕಪ್: ಶಮಿ ಹೊರಕ್ಕೆ; ಭುವಿಗೆ ಸ್ಥಾನ

Update: 2016-02-19 17:37 GMT

 ಹೊಸದಿಲ್ಲಿ, ಫೆ.19: ಮುಂಬರುವ ಏಷ್ಯಾ ಕಪ್‌ಗೆ ವೇಗದ ಬೌಲರ್ ಮುಹಮ್ಮದ್ ಶಮಿ ಇನ್ನೂ ಫಿಟ್‌ನೆಸ್ ಸಮಸ್ಯೆಯಿಂದ ಹೊರಬಾರದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಸೇವೆಗೆ ಅಲಭ್ಯರಾಗಿದ್ದಾರೆ.
ಭುವನೇಶ್ವರ್‌ಕುಮಾರ್ ಅವರು ಶಮಿ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮುಂಬರುವ ಟ್ವೆಂಟಿ-20 ವಿಶ್ವಕಪ್‌ಗೆ ತಂಡಕ್ಕೆ ವಾಪಸಾಗುವುದನ್ನು ನಿರೀಕ್ಷಿಸಲಾಗಿದೆ. ಕೆಲವು ದಿನಗಳ ಹಿಂದೆ ಶಮಿ ತಂಡದ ಸೇವೆಗೆ ಫಿಟ್ ಆಗಿರುವುದಾಗಿ ಹೇಳಿದ್ದರು.
 ಬಿಸಿಸಿಐ ಇಂದು ಶಮಿ ಏಷ್ಯಕಪ್‌ಗೆ ತಂಡದ ಸೇವೆಗೆ ಇಲ್ಲ ಎಂದು ಹೇಳಿದ್ದು, ಭುವನೇಶ್ವರ್ ಕುಮಾರ್ ಅವರನ್ನು ಅವರ ಬದಲಿಗೆ ತಂಡದಲ್ಲಿ ಸೇರಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News