×
Ad

ಹಿರಾ ಮಹಿಳಾ ಕಾಲೇಜಿನಲ್ಲಿ ‘ಲಿಟ್ ಫೆಸ್ಟ್’ ಕಾರ್ಯಕ್ರಮ

Update: 2016-02-19 23:28 IST

ಮಂಗಳೂರು, ಫೆ.19: ಬಬ್ಬುಕಟ್ಟೆಯ ಹಿರಾ ಮಹಿಳಾ ಕಾಲೇಜು ವತಿಯಿಂದ ಅಂತರ್ ಕಾಲೇಜು ಮಟ್ಟದ ‘ಹಿರಾ ಲಿಟ್ ಪೆಸ್ಟ್ 2016’ ಸ್ಪರ್ಧಾ ಕಾರ್ಯಕ್ರಮ ನಡೆಯಿತು. 16 ಪದವಿ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸನ್ಮಾರ್ಗ ವಾರಪತ್ರಿಕೆಯ ಸಂಪಾದಕ ಎ.ಕೆ. ಕುಕ್ಕಿಲ, ‘ಸ್ಪರ್ಧೆಗಳಿಂದ ಆತ್ಮವಿಶ್ವಾಸ ಮೂಡುತ್ತದೆ. ದೌರ್ಬಲ್ಯಗಳನ್ನು ಸಕರಾತ್ಮಕವಾಗಿ ತೆಗೆದುಕೊಂಡು, ಜೀವನದಲ್ಲಿ ಗುರಿ ಸಾಧಿಸಬೇಕು’ಎಂದು ಹೇಳಿದರು.

ಮುಸ್ಲಿಮ್ ಮಹಿಳಾ ಸಾಹಿತ್ಯ ಸಂಘದ ಅಧ್ಯಕ್ಷೆ ಸಮೀನಾ ಅಪ್ಶಾನ ಮಾತನಾಡಿ ‘ಜೀವನದಲ್ಲಿ ನಾವಿಡುವ ಪ್ರತಿಯೊಂದು ಹೆಜ್ಜೆಯೂ ಹಿಮದ ರಾಶಿಯಲ್ಲಿ ನಡೆದಂತೆ, ನಮ್ಮ ಛಾಪನ್ನು ಉಳಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಅನಗತ್ಯ ವಿಷಯಗಳಿಂದ ದೂರವಿದ್ದು, ಸಮಯವನ್ನು ಸದು ಪಯೋಗಪಡಿಸಿ, ಭವಿಷ್ಯದಲ್ಲಿ ಉತ್ತಮ ಹಾದಿಯನ್ನು ಆರಿಸಿ, ತಮ್ಮ ಸಾಧನೆಯನ್ನು ತೋರಿಸಿಕೊಡಬೇಕಾದೆ’ ಎಂದು ನುಡಿದರು.

 ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕ ರಹಮತುಲ್ಲ, ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು ಹಾಗೂ ಹಿರಾ ಸಂಸ್ಥೆಗಳು ಮುಖ್ಯ ಶಿಕ್ಷಕಿಯರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲೆ ಭಾರತಿ ಎಂ.ಆರ್. ಸ್ವಾಗತಿಸಿದರು. ವಿದ್ಯಾರ್ಥಿ ನಾಯಕಿ ಝಬೀನಾ ನಿರೂಪಿಸಿದರು. ರವೀನಾ ವಂದಿಸಿದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಾಹಿತಿ ಚಂದ್ರಕಲಾ ನಂದಾವರ ಭಾಗವಹಿಸಿ ಮಾತನಾಡಿದರು. ಶಾಂತಿ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಅಬ್ದುರ್ರಹ್ಮಾನ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಸದಸ್ಯೆ ಸಾಜಿದಾ ಮೂಮಿನ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.
 ಕಾರ್ಯಕ್ರಮದ ಸಂಯೋಜಕಿ ಪ್ರಮೀಳಾ ಕೆ. ಸ್ವಾಗತಿಸಿದರು. ಫಾತಿಮಾ ರುಬಿ ನಹಾನ ವಂದಿಸಿದರು. ಸುಮಯ್ಯಾ ಮರಿಯಮ್ ಕಾರ್ಯಕ್ರಮ ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News