×
Ad

ಯುವಜನತೆ ಮಾದಕ ದ್ರವ್ಯಗಳಿಗೆ ಬಲಿ: ಡಾ.ಭಂಡಾರಿ

Update: 2016-02-19 23:33 IST


ಉಡುಪಿ, ಫೆ.19: ಮಾದಕ ದ್ರವ್ಯಗಳ ಸೇವನೆಯಿಂದ ಆರೋಗ್ಯ ಹದಗೆಡು ವುದಲ್ಲದೆ, ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಳ್ಳುತ್ತಾರೆ. ಇಂದಿನ ಈ ಜಾಗತೀಕರಣದ ಸಂದಭರ್ದಲ್ಲಿ ದೇಶದ ಹೆಚ್ಚಿನ ಬಹುಪಾಲು ಯುವಜನತೆ ಮಾದಕ ದ್ರವ್ಯಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಎಚ್ಚೆತ್ತು ಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಉಡುಪಿಯ ಮನೋ ವೈದ್ಯ ಡಾ.ಪಿ.ವಿ. ಭಂಡಾರಿ ಹೇಳಿದ್ದಾರೆ.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಎನ್ನೆಸ್ಸೆಸ್ ಟಕ, ಕಲ್ಯಾಣಪುರ ರೋಟರಿ ಕ್ಲಬ್ ಹಾಗೂ ಉಡುಪಿಯ ನೇಟಿವ್ ಆರ್ಗನೈಝೇಷನ್‌ನ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಲಾದ ಯುವಜಾಗೃತಿ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತಿದ್ದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ನೇರಿ ಕರ್ನೇಲಿಯೊ ವಹಿಸಿ ದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಅಧ್ಯಕ್ಷ ಆನಂದ ಶೆಟ್ಟಿ, ನೇಟಿವ್ ಆರ್ಗನೈಝೇಷನ್‌ನ ಪ್ರೇಮಾನಂದ ಕಲ್ಮಾಡಿ, ವಿಜಯ ಮಯ್ಯಾಡಿ, ಮುಹಮ್ಮದ್ ಇಕ್ಬಾಲ್ ಭಾಗವಹಿಸಿದ್ದರು. 
 ಎನ್ನೆಸ್ಸೆಸ್ ಅಧಿಕಾರಿ ಅಂಪಾರು ನಿತ್ಯಾನಂದ ಶೆಟ್ಟಿ, ರಿನಾಲ್ ರೊಡ್ರಿಗಸ್ ಉಪಸ್ಥಿತರಿದ್ದರು. ಭಾಗ್ಯಶ್ರೀ ಸ್ವಾಗತಿಸಿದರು. ವಿನೀತಾ ಸಪಲ್ಯ ವಂದಿಸಿದರು. ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News