ನೇರಳಕಟ್ಟೆಯಲ್ಲಿ ವಾಬಾಲ್ ಪಂದ್ಯಲಿ
ವಿಟ್ಲ, ಫೆ.19: ಪೆರಾಜೆ-ನೇರಳಕಟ್ಟೆಯ ಕೇಸರಿ ಫ್ರೆಂಡ್ಸ್ ಆಶ್ರಯದಲ್ಲಿ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯವು ನೇರಳಕಟ್ಟೆಯಲ್ಲಿ ನಡೆಯಿತು. ಡಾ. ವೈ.ಗಣರಾಜ್ ಎಲ್ಕಣ ಪಂದ್ಯ ಉದ್ಘಾಟಿಸಿದರು. ಕೃಷಿಕ ಸುರೇಶ್ ರೈ ಕುರ್ಲೆತ್ತಿಮಾರುಅಧ್ಯಕ್ಷತೆ ವಹಿಸಿದ್ದರು. ನೆಟ್ಲಮುಡ್ನೂರು ಗ್ರಾಪಂ ಸದಸ್ಯರಾದ ಡಿ. ತನಿಯಪ್ಪಗೌಡ, ಪ್ರೇಮನಾಥ ಶೆಟ್ಟಿ ಮೂಡಾಯೂರು, ಕೆದಿಲ ಗ್ರಾಪಂ ಸದಸ್ಯ ಉಮೇಶ್ ಮುರುವ, ಡೊಂಬಯ್ಯ ನಾಯ್ಕ, ನೆಲ್ಯಾಡಿ ಬೆಥನಿ ಕಾಲೇಜಿನ ಉಪನ್ಯಾಸಕ ಚಂದ್ರಶೇಖರ, ನೇರಳಕಟ್ಟೆ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷ ವಾಮನ ಕುಲಾಲ್ ಮಿತ್ತ ಪೆರಾಜೆ, ನೇರಳಕಟ್ಟೆ ಸಿ.ಎ. ಬ್ಯಾಂಕ್‌ನ ಸಿಇಒ ದಿನಕರ ನಾಯಕ್, ಬಾಬನಕಟ್ಟೆ ಶಾಖಾಧಿಕಾರಿ ಮೋಹನ್ ಕುಲಾಲ್, ಪ್ರಮುಖರಾದ ಮಂಜುನಾಥ ನೇರಳಕಟ್ಟೆ, ಬೇಬಿ ನಾಯ್ಕ್ಕೆ ನೇರಳಕಟ್ಟೆ, ಪದ್ಮನಾಭ ಕುಲಾಲ್ ಪೆರಾಜೆ, ಭೋಜ ನಾರಾಯಣ, ವಿಶುಕುಮಾರ್, ಎನ್.ಎಚ್. ಇಸ್ಮಾಯೀಲ್, ಚಂದ್ರಶೇಖರ್ ಕುಲಾಲ್, ಕರೀಮ್ ಒಕ್ಕೆತ್ತೂರು,ಹಕೀಮ್ ನೆಡ್ಯಾಲು, ಫಝಲ್ ಸಾಹೇಬ್ ಭಾಗವಹಿಸಿದ್ದರು. ಕೇಸರಿ ಫ್ರೆಂಡ್ಸ್ ಅಧ್ಯಕ್ಷ ಪ್ರದೀಪ್ ಕುಲಾಲ್ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ್ ಪೂಜಾರಿ ವಂದಿಸಿದರು. ಶಾಕಿರ್ ಕೆಂಪುಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.