ಉಗಾಂಡ: ಸಾಮಾಜಿಕ ಮಾಧ್ಯಮಗಳ ನಿಷೇಧಕ್ಕೆ ಸಾಕ್ಷಿಯಾದ ಚುನಾವಣೆ

Update: 2016-02-19 18:18 GMT

ಕಂಪಾಲಾ,ಫೆ.19: ಗುರುವಾರ ಉಗಾಂಡದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯು ಪ್ರಮುಖ ಪ್ರತಿಪಕ್ಷ ಅಭ್ಯರ್ಥಿಯ ಬಂಧನ, ಸಾಮಾಜಿಕ ಜಾಲತಾಣಗಳ ನಿಷೇಧ ಮತ್ತು ಕಪಟ ಮತದಾನ ಆರೋಪಗಳಿಗೆ ಸಾಕ್ಷಿಯಾಯಿತು. ಕಳೆದ 30 ವರ್ಷಗಳಿಂದ ಉಗಾಂಡಾವನ್ನು ಆಳುತ್ತಿರುವ ಐದನೆ ಅವಧಿಗೂ ಗದ್ದುಗೆಯನ್ನು ಅಲಂಕರಿಸುವ ಕನಸು ಕಂಡಿರುವ ಅಧ್ಯಕ್ಷ ಯೊವೆರಿ ಮುಸೆವೆನಿ ಅವರ ಭವಿಷ್ಯವನ್ನು ನಿರ್ಧರಿಸಲಿರುವ ಈ ಚುನಾವಣೆ ದಿನವಿಡೀ ಉದ್ವಿಗ್ನ ವಾತಾವರಣ ಕಂಡಿತು.

ಬೆಳ್ಳಂಬೆಳಗ್ಗೆಯೇ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಲಾಗಿತ್ತು. ಪಶ್ಚಿಮ ಉಗಾಂಡಾದ ತವರೂರಿನಲ್ಲಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಸೆವೆನಿ,ಹಿಂಸೆಯನ್ನು ಪ್ರಚೋದಿಸುವ ವದಂತಿಗಳ ಹರಡುವಿಕೆಯನ್ನು ಮತ್ತು ಚುನಾವಣಾ ಫಲಿತಾಂಶಗಳ ಅಕ್ರಮ ಘೋಷಣೆಯನ್ನು ತಡೆಗಟ್ಟಲು ಸುರಕ್ಷತಾ ಕ್ರಮವಾಗಿ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಲಾಗಿದೆ ಎಂದು ಸಮರ್ಥಿಸಿಕೊಂಡರು. ಸರಕಾರದ ಈ ಕ್ರಮವನ್ನು ಮಾನವ ಹಕ್ಕುಗಳ ಗುಂಪುಗಳು ಬಲವಾಗಿ ಖಂಡಿಸಿವೆ.

ತನ್ಮಧ್ಯೆ ಪ್ರತಿಪಕ್ಷ ಅಭ್ಯರ್ಥಿ ಕಿಝಾ ಬೆಸಿಗ್ಯೆ ಅವರನ್ನು ರಾಜಧಾನಿ ಕಂಪಾಲಾ ಸಮೀಪ ಬಂಧಿಸಿ ಮೂರು ಗಂಟೆಗಳ ಬಳಿಕ ಬಿಡುಗಡೆಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News