ಫೆ. 21: ಮಂಚಿಯಲ್ಲಿ ತಾಜುಲ್ ಉಲಮಾ ಅನುಸ್ಮರಣೆ
Update: 2016-02-19 23:56 IST
ಬಂಟ್ವಾಳ, ಫೆ.19: ತಾಲೂಕಿನ ಮಂಚಿ ಗ್ರಾಮದ ಮುಹಮ್ಮದಿಯಾ ಮಸೀದಿಯಲ್ಲಿ ಫೆ. 21ಕ್ಕ್ಕೆ ಜುಮಾ ಮಸೀದಿ, ತಕ್‌ವೀತುಲ್ ಇಸ್ಲಾಂ ಮದರಸ ಮಂಚಿ ಹಾಗೂ ಎಸ್‌ಬಿಎಸ್ ಇವುಗಳ ಸಂಯುಕ್ತಾಶ್ರಯದಲ್ಲಿ ತಾಜುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಚಿ ಉಸ್ತಾದ್ ವಹಿಸಲಿದ್ದಾರೆ. ಇ.ಕೆ ಇಬ್ರಾಹೀಂ ಮುಸ್ಲಿಯಾರ್ ಖಾಝಿ ಮುಖ್ಯಪ್ರಭಾಷಣ ಮಾಡಲಿದ್ದು, ಮತ್ತಿತರರು ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.