×
Ad

ಅಜೆಕಾರು: ಮರ ಬಿದ್ದು ವ್ಯಕ್ತಿ ಮೃತ್ಯು

Update: 2016-02-19 23:57 IST

ಕಾರ್ಕಳ, ಫೆ.19: ಕಡಿಯುತ್ತಿದ್ದ ಒಣಮರವೊಂದು ಪಕ್ಕದಲ್ಲಿ ನಿಂತಿದ್ದ ಮನೆಯ ಯಜಮಾನನ ಮೇಲೆ ಬಿದ್ದು ಅವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅಜೆಕಾರು ಸಮೀಪದ ಹೆರ್ಮುಂಡೆ ಗ್ರಾಮದ ಕರ್ಜಿಪಲ್ಕೆ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.
ಹೆರ್ಮುಂಡೆ ನಿವಾಸಿ ವೃತ್ತಿಯಲ್ಲಿ ಎಲೆಕ್ಟ್ರಿಶಿಯನ್ ಆಗಿದ್ದ ವಿಜಯ ಹೆಗ್ಡೆ(38) ಎಂಬವರೇ ಮೃತಪಟ್ಟ ವ್ಯಕ್ತಿ. ವಿಜಯ ಹೆಗ್ಡೆ ತಮ್ಮ ಮನೆಯ ತೆಂಗಿನ ತೋಟದಲ್ಲಿ ಒಣಗಿದ್ದ ಮರವೊಂದನ್ನು ಕಡಿಯಲು ಬುಧವಾರ ಸಂಜೆ ವ್ಯಕ್ತಿಯೊಬ್ಬರನ್ನು ಕರೆಸಿದ್ದರು.
ಆತ ಯಾಂತ್ರಿಕ ಗರಗಸದಿಂದ ಬೃಹತ್ ಮರವನ್ನು ಕಡಿಯುತ್ತಿದ್ದಾಗ ವಿಜಯ ಹೆಗ್ಡೆ ಪಕ್ಕದಲ್ಲಿ ನಿಂತಿದ್ದರು. ತೆಂಗಿನ ಮರವನ್ನು ತಪ್ಪಿಸಿ ಮರ ಕೆಡವಲು ಬೇಕಾದಂತೆ ಮರವನ್ನು ಕಡಿಯುತ್ತಿದ್ದಾಗ ಹಠಾತ್ತಾಗಿ ಮರ ಉರುಳಿದಾಗ ಗಲಿಬಿಲಿಗೊಂಡ ವಿಜಯ ಹೆಗ್ಡೆ ತಪ್ಪಿಸಿಕೊಳ್ಳಲು ಓಡುತ್ತಿದ್ದಾಗ ಅವರು ಮರದಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದರು. ತಲೆಗೆ ಮರಬಡಿದ ಪರಿಣಾಮ ತಲೆ ಹಾಗೂ ಕಾಲು ಛಿದ್ರಗೊಂಡಿತ್ತೆಂದು ಅಲ್ಲಿ ನೆರೆದಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News