×
Ad

ಹರ್ಯಾಣದಲ್ಲಿ ಮುಂದುವರಿದ ಜಾಟ್ ಸಮುದಾಯದ ಪ್ರತಿಭಟನೆ; ರೈಲು ನಿಲ್ದಾಣಕ್ಕೆ ಬೆಂಕಿ, ಹೈವೇ ಬಂದ್‌

Update: 2016-02-20 10:09 IST

ಚಂಡೀಗಢ, ಫೆ.20: ಹಿಂದುಳಿದ ಸಮುದಾಯಕ್ಕೆ ಜಾಟ್ ಸಮುದಾಯದವನ್ನು ಸೇರ್ಪಡೆಗೊಳಿಸದಿರುವುದನ್ನು ವಿರೋಧಿಸಿ  ಹರ್ಯಾಣದಲ್ಲಿ  ಜಾಟ್‌ ಸಮುದಾಯದ ಪ್ರತಿಭಟನೆ  ಮುಂದುವರಿದಿದ್ದು, ಇಂದು ಜಿಂದಾದಲ್ಲಿ ಭುದಾ ಖೇರಾ  ರೈಲು ನಿಲ್ದಾಣದಲ್ಲಿ ಬೆಂಕಿ ಹಚ್ಚಿದ್ದಾರೆ. ಬಹಾದೂರ್ ಗ್ರಹಾ  ಹೈವೆಯನ್ನು ಬಂದ್‌ ಮಾಡಿದ್ದಾರೆ..
ರೈಲು ನಿಲ್ದಾಣಕ್ಕೆ ಸೇನೆ  ಹೆಲಿಕಾಪ್ಟರ್‌ ಮೂಲಕ  ತಲುಪಿದೆ
ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಚಳವಳಿಯನ್ನು ಮುಂದುವರಿಸಿರುವ ಜಾಟ್‌ ಸಮುದಾಯದ ಮುಖಂಡರು ಶುಕ್ರವಾರ ಸರಕಾರದ ಪ್ರಸ್ತಾಪವನ್ನು ತಿರಸ್ಕರಿಸಿದ್ದರು.
ಕೈತಾಲ್‌ನ ಬಿಜೆಪಿ ಎಂಪಿ ರಾಜ್‌ ಕುಮಾರ್‌ ಸೈನಿ ಅವರ ಮನೆಗೆ ಶುಕ್ರವಾರ ಸಂಜೆ ಪ್ರತಿಭಟನೆಕಾರರು ಕಲ್ಲೆ ಕಲ್ಲು ತೂರಾಟ ನಡೆಸಿ ಹಾನಿಯನ್ನುಂಟು ಮಾಡಿದ್ದರು. ಸುಮಾರು 50ಮಂದಿಯ ತಂಡ ಸೈನಿ ಮನೆಗೆ ದಾಳಿ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ  ರೋಹ್ಟಕ್‌-ದಿಲ್ಲಿ ಬೈಪಾಸ್‌ ಬಂದ್‌ ಮಾಡಿ ಗೃಹ ಸಚಿವರ ಮನೆಗೆ ದಾಳಿ ಮಾಡಿದ ಚಳವಳಿಗಾರರನ್ನು ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ ಪರಿಣಾಮವಾಗಿ, 3  ಮಂದಿ ಮೃತಪಟ್ಟು 21 ಮಂದಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News