ನಾಲ್ಕರ ಪೋರನಿಗೆ ಕೊಲೆ ಅಪರಾಧಕ್ಕೆ ಜೀವಾವಧಿ ಶಿಕ್ಷೆ ನೀಡಿದ ಮಿಲಿಟರಿ ಕೋರ್ಟ್ !

Update: 2016-02-20 05:24 GMT

ಕೈರೋ : ಈಜಿಪ್ಟಿನ ಮಿಲಿಟರಿ ನ್ಯಾಯಾಲಯವೊಂದು ನಾಲ್ಕು ವರ್ಷದ ಬಾಲಕನೊಬ್ಬನನ್ನು ಆತ ಎರಡು ವರ್ಷದವನಿರುವಾಗ ನಡೆದ ಕೊಲೆ ಪ್ರಕರಣವೊಂದರಲ್ಲಿ ದೋಷಿಯೆಂದು ಪರಿಗಣಿಸಿದ್ದು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಅಹಮದ್ ಮನ್ಸೌರ್ ಕರ್ನಿ ಎಂಬ ಹೆಸರಿನ ಬಾಲಕನನ್ನುಈ ವಾರ ಸಾಮೂಹಿಕ ವಿಚಾರಣೆ ನಡೆದ ಸಂದರ್ಭದಲ್ಲಿ ಆತನ ಅನುಪಸ್ಥಿತಿಯಲ್ಲಿ ಪಶ್ಚಿಮ ಕೈರೋದ ಮಿಲಿಟರಿ ನ್ಯಾಯಾಲಯವುಆತನನ್ನು ಕೊಲೆ, ಶಾಂತಿ ಕದಡುವಿಕೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಪ್ರಕರಣದಲ್ಲಿ ದೋಷಿಯೆಂದು ಪರಿಗಣಿಸಿದೆ.

ಜನವರಿ 2014ರಲ್ಲಿ ಕೈರೋದ ದಕ್ಷಿಣಕ್ಕೆ70 ಕಿಮಿ ದೂರವಿರುವ ಫಾಯೋಮ್ ಪ್ರಾಂತ್ಯದಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯವು ಶಿಕ್ಷೆಗೆ ಗುರಿಪಡಿಸಿದ ಒಟ್ಟು 116 ಮಂದಿಯಲ್ಲಿ ಕರ್ನಿ ಒಬ್ಬನಾಗಿದ್ದಾನೆ. ಬಾಲಕನಜನನ ಪ್ರಮಾಣ ಪತ್ರವನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದರೂ ಅದನ್ನು ನ್ಯಾಯಾಧೀಶರು ಓದಿಲ್ಲವೆಂದು ಪ್ರತಿವಾದಿ ವಕೀಲ ಫೈಸಲ್-ಎ- ಸಯದ್ ಜೆರುಸಲೆಂ ಪೋಸ್ಟ್‌ಗೆ ಹೇಳಿದ್ದಾರೆಂದು ವರದಿಯಾಗಿದೆ.

‘‘ಬಾಲಕನ ಹೆಸರನ್ನು ಆರೋಪಿಗಳ ಪಟ್ಟಿಗೆ ಸುರಕ್ಷಾ ಅಧಿಕಾರಿಗಳು ಸೇರಿಸಿದ ನಂತರ ಜನನ ಪ್ರಮಾಣ ಪತ್ರವನ್ನು ಸಲ್ಲಿಸಲಾಗಿತ್ತು. ಆದರೆಅಷ್ಟರಲ್ಲಿಪ್ರಕರಣವನ್ನು ಮಿಲಿಟರಿ ಕೋರ್ಟಿಗೆ ವರ್ಗಾಯಿಸಲಾಗಿತ್ತು ಹಾಗೂ ಮಗುವಿನ ಅನುಪಸ್ಥಿತಿಯಲ್ಲಿ ಶಿಕ್ಷೆಯನ್ನು ಘೋಷಿಸಲಾಯಿತು,’’ಎಂದುಫೈಸಲ್ ಹೇಳಿದ್ದಾರೆನ್ನಲಾಗಿದೆ.

ಆರೋಪ ಪಟ್ಟಿಯಲ್ಲಿ ನಾಲ್ಕು ಕೊಲೆಗಳು, ಎಂಡು ಕೊಲೆಯತ್ನಗಳು,ಈಜಿಪ್ಟ್ ಆರೋಗ್ಯ ಇಲಾಖೆಯ ಆಸ್ತಿ ಪಾಸ್ತಿ ಹಾನಿಗೊಳಿಸಿರುವುದು, ಸೈನಿಕರನ್ನು ಹಾಗೂ ಪೊಲೀಸರನ್ನು ಬೆದರಿಸಿರುವುದು ಹಾಗೂಸುರಕ್ಷಾ ಪಡೆಗಳ ವಾಹನಗಳನ್ನು ಹಾನಿಗೊಳಿಸಿರುವುದು ಸೇರಿವೆ.

‘‘ಈಜಿಪ್ಟಿನಲ್ಲಿ ನ್ಯಾಯ ಇಲ್ಲವಾಗಿದೆ. ವಿಚಾರವಂತಿಕೆ ಇಲ್ಲಿ ಸ್ವಲ್ಪ ಹೊತ್ತಿಗೆ ಮುಂಚೆ ಆತ್ಮಹತ್ಯೆ ಮಾಡಿಕೊಂಡಿದೆ. ಈಜಿಪ್ಟನ್ನು ಹುಚ್ಚರ ಒಂದು ಗುಂಪು ಆಳುತ್ತಿದೆ,’’ ಎಂದು ಕರ್ನಿಯ ವಕೀಲ ಮೊಹಮ್ಮದ್ ಅಬು ಹುರಿರಾ ಹೇಳಿದ್ದಾರೆ.

ಶುಕ್ರವಾರ ಕರ್ನಿಯದ್ದೆಂದು ಹೇಳಲಾದ ಭಾವಚಿತ್ರವೊಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿತ್ತಾದರೂ ನಂತರಆ ಭಾವಚಿತ್ರ ಆತನದ್ದಲ್ಲ ಬದಲಾಗಿ ಇಸ್ರೇಲಿ ಸೇನೆ 2013ರಲ್ಲಿ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿದಾಳಿ ಮಾಡಿದ ಮನೆಯೊಂದರ ಬಾಲಕನ ಚಿತ್ರವೆಂದುತಿಳಿದು ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News