×
Ad

ಬ್ರಿಟನ್‌ನಲ್ಲಿ ಮಾಜಿ ಇಮಾಂ ಹತ್ಯೆ : ಜನಾಂಗೀಯ ಪ್ಯಾಶಿಸ್ಟರಿಂದ ಕೃತ್ಯಶಂಕೆ !

Update: 2016-02-20 11:17 IST

ಬ್ರಿಟನ್: ಇತ್ತೀಚೆಗೆ ಬ್ರಿಟನ್ ಸಹಿತ ಯುರೋಪಿಯನ್ ರಾಷ್ಟ್ರಗಳಲ್ಲಿ ಮುಸ್ಲಿವರ ವಿರುದ್ಧ ದ್ವೇಷ ವ್ಯಾಪಕಗೊಂಡಿದ್ದು ಇಸ್ಲಾಮೊಫೋಬಿಯ ಹಿಡಿಸಿಕೊಂಡವರಿಂದಾಗುತ್ತಿರುವ ತಾರತಮ್ಯ, ಅಪಹಾಸ್ಯ ಹಾಗೂ ಹಿಂಸೆಗೆ ಅನೇಕ ಅಮಾಯಕ ಮುಸ್ಲಿಮರು ಬಲಿಯಾಗುತ್ತಿದ್ದಾರೆ. ಐಸಿಸ್ ನಡೆಸಿದೆನ್ನಲಾದ ಪ್ಯಾರಿಸ್ ದಾಳಿಯಲ್ಲಿ 130 ಮಂದಿ ಹತ್ಯೆಗೊಂಡ ತರುವಾಯ ಇಸ್ಲಾಮೋಫೋಬಿಯ ಬ್ರಿಟನ್‌ನಲ್ಲಿ ಹತ್ತು ಪಟ್ಟು ಹೆಚ್ಚಳಗೊಂಡಿದೆ. ರೋಚ್‌ಡೈಲಿಯ ಪ್ಲೇಗ್ರೌಂಡ್ ಸಮೀ ಜಲಾಲುದ್ದೀನ್ ಎಂಬ(56) ಮಾಜಿ ಇಮಾಮ್ ಒಬ್ಬರ ಹತ್ಯೆ ನಡೆದಿದ್ದು ಜನಾಂಗೀಯವಾದಿಗಳಿಂದ ಅವರು ಹತ್ಯೆಗೀಡಾಗಿದ್ದಾರೆಎಂಬ ಶಂಕೆ ಬಲವಾಗಿ ಬ್ರಿಟನ್‌ನಲ್ಲಿ ವ್ಯಕ್ತವಾಗಿದೆ.

ರಾತ್ರಿಯಲ್ಲಿ ಮಕ್ಕಳ ಆಟದ ಮೈದಾನವೊಂದರ ಪಕ್ಕದಿಂದ ತನ್ನ ಮನೆಗೆ ಮರಳುತ್ತಿದ್ದಾಗ ಅವರನ್ನು ಆಕ್ರಮಿಸಲಾಗಿದೆ. ರಾತ್ರಿಯ ವೇಳೆ ಗೆಳೆಯರೊಬ್ಬರ ಜೊತೆ ಉಪಾಹಾರ ಸೇವಿಸಿ ಹತ್ತಿರದ ದಾರಿಯ ಮೂಲಕ ಮನೆಯೆಡೆಗೆ ಅವರು ಹೊರಟಿದ್ದರು. ಈ ಸಂದರ್ಭದಲ್ಲಿ ಅವರ ಮೇಲೆ ಹಲ್ಲೆಯಾಗಿದ್ದು ತಲೆಗೆ ಗಂಭೀರ ಗಾಯಗಳಾಗಿವೆ. ಅವರ ದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಕಳೆದ ಗುರುವಾರ ರಾತ್ರಿ ಈದಾರುಣ ಘಟನೆ ನಡೆದಿತ್ತು. ಜನಾಂಗೀಯವಾದಿಗಳು ಹತ್ಯೆಎಸಗಿದ್ದಾರೆಂದು ಬಲವಾದ ಶಂಕೆ ವ್ಯಕ್ತವಾಗಿದ್ದರೂ ಸದ್ಯ ೊಲೀಸರು ಇದನ್ನು ದೃಢೀಕರಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News