×
Ad

ಅಡ್ಡೂರಿನಲ್ಲಿ ಮಾತಿನ ಚಕಮಕಿ: ಕಾರಿಗೆ ಕಲ್ಲು ತೂರಾಟ

Update: 2016-02-20 12:10 IST

ಮಂಗಳೂರು, ಫೆ.20: ಗುರುಪುರ ಜಿ.ಪಂ. ವ್ಯಾಪ್ತಿಯ ಅಡ್ಡೂರಿನ ಸ.ಹಿ.ಪ್ರಾ.ಶಾಲೆಯ ಮತಗಟ್ಟೆಯಲ್ಲಿ ಕಾಂಗ್ರೆಸ್ ಹಾಗೂ ವಿಶ್ವ ಹಿಂದೂ ಪರಿಷತ್ ಮುಖಂಡ ಜಗದೀಶ ಶೇಣವ ನಡುವೆ ಮಾತಿನ ಚಕಮಕಿ ನಡೆದ ಘಟನೆ ವರದಿಯಾಗಿದೆ.

 
ಘಟನೆಯಲ್ಲಿ ಜಗದೀಶ ಶೇಣವರ ಕಾರಿಗೆ ಕಲ್ಲು ತೂರಾಟ ನಡೆಸಿ ಹಾನಿ ಮಾಡಲಾಗಿದೆ. ಇಂದು ಬೆಳಗ್ಗೆ ಸುಮಾರು 11.15ರ ಸುಮಾರಿಗೆ ಅಡ್ಡೂರಿನ ಸ.ಹಿ.ಪ್ರಾ.ಶಾಲೆಯ ಮತ ಗಟ್ಟೆಗೆ ಶೇಣವ ಭೇಟಿ ನೀಡಿದ್ದು, ಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸಿತು. ಶಾಲಾ ಗೇಟ್ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಅಡ್ಡೂರು ಗ್ರಾ.ಪಂ. ಸದಸ್ಯ ಅಶ್ರಫ್ ಮತ್ತು ಜಗದೀಶ್ ಶೇಣವ ನಡುವೆ ಮಾತಿನ ಚಕಮಕಿ ನಡೆಯಿತು. 


ಇದು ವಿಕೋಪಕ್ಕೆ ಏರಿದ ಪರಿಣಾಮ ಶೇಣವ ಕಾಂಗ್ರೆಸ್ ಕಾರ್ಯಕರ್ತರನ್ನು ಹೀಯಾಳಿಸಿ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೆ ಅಶ್ರಫ್ ಶೇಣರರನ್ನು ಉದ್ದೇಶಿಸಿ ಮಾಹ ನಗರ ಪಾಲಿಕೆ ವ್ಯಾಪ್ತಿಗೆ ಬರುವ ನಿಮಗೆ ಇಲ್ಲಿ ಬಂದು ಮತ ಗಟ್ಟಗೆ ಭೇಟಿ ನೀಡುವ ಅಧಿಕಾರ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದ್ದು, ಈ ಸಂದರ್ಭ ಗುರುಪುರ ಜಿಲ್ಲಾ ಪಂ. ಬಿಜೆಪಿ ಅಭ್ಯರ್ಥಿ ಹರೀಶ್, ಕೇಶವರನ್ನು ಸಮಧಾನ ಪಡಿಸಿದರೆನ್ನಲಾಗಿದ್ದು, ಕೆಲಹೊತ್ತಿನಲ್ಲಿ ಶೇಣವರ ಕಾರಿಗೆ ಕಲ್ಲು ತೂರಾಟ ನಡೆಸಿ ಗಾಜಿಗೆ ಹಾನಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News