ದ.ಕ., ಉಡುಪಿ ಜಿಲ್ಲೆಯಾದ್ಯಂತ ಬಿರುಸಿನ ಮತದಾನ
ಮಂಗಳೂರು: ದ.ಕ. ಜಿ.ಪಂ. ಮತ್ತು ತಾ. ಪಂ. ಚುನಾವಣೆ ಸುಮಾರು 1 ಗಂಟೆಯ ವರೆಗೆ ಶೇ. 44.38 ಮತ ಚಲಾವಣೆಯಾಗಿದೆ.
ನಡುಪದವು: ಬೂತ್ ಸಂಖ್ಯೆ 117ರಲ್ಲಿ ಮತಯಂತ್ರ ಕೊಟ್ಟ ಕಾರಣ ತಡವಾಗಿ ಮತ ಚಲಾವಣೆಯಾದ ಬಗ್ಗೆ ಮಾಹಿತಿ ತೊರಕಿದೆ.
ಅಡ್ಯಾರ್: ಮತಯಂತ್ರ ದೋಷದಿಂದ ಅರ್ಧ ಗಂಟೆ ಮತದಾನ ವಿಳಂಬವಾಗಿದೆ.
ಯೆಡ್ಪದವು, ಕುಪ್ಪೇಪದವು ತಾಲೂಕ್ ಪಂಚಾಯತ್ ವ್ಯಾಪ್ತಿಯ ಕಲ್ಲಡ್ಯದಲ್ಲಿ ಕೈ ಕೊಟ್ಟ ಮತಯಂತ್ರ ಇದರಿಂದ 15 ನಿಮಿಷ ತಡವಾಗಿದೆ.
ಯೆಡಪದವು, ಪೆರರ್ದದಲ್ಲಿ ವಿದ್ಯುತ್ ಕಡಿತದಿಂದ ಮತದಾನಕ್ಕೆ ತೊಂದರೆಯಾಗಿದೆ.
ಮತಯಂತ್ರದಲ್ಲಿ ತಾಂತ್ರಿಕ ದೋಷ: 5 ಕೇಂದ್ರದಲ್ಲಿ ಮತದಾನ ವಿಳಂಬ
ಪುತ್ತೂರು: ಮತ ಯಂತ್ರದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಪುತ್ತೂರು ತಾಲೂಕಿನ ವಳಕಡಮ, ಹಂಟ್ಯಾರು, ಈಶ್ವರಮಂಗಲ, ಬನ್ನೂರು ಮತ್ತು ಪಟ್ಟೆ ಮತದಾನ ಕೇಂದ್ರಗಳಲ್ಲಿ ಮತದಾನ ವಿಳಂಭವಾಗಿ ಆರಂಭಗೊಂಡಿದೆ.
ಹಂಟ್ಯಾರು ಶಾಲೆಯಲ್ಲಿ ಮತದಾನ ಯಂತ್ರದಲ್ಲಿ ದೋಷ ಕಾಣಿಸಿಕೊಂಡ ಪರಿಣಾಮವಾಗಿ ಒಂದು ಗಂಟೆ ತಡವಾಗಿ ಮತದಾನ ಆರಂಭಗೊಂಡಿದೆ.
ಇಲ್ಲಿ ಹೆಚ್ಚುವರಿ ಮತಯಂತ್ರವನ್ನು ತಂದಿರಿಸಲಾಗಿದ್ದರೂ ಅದರಲ್ಲಿ ಬ್ಯಾಲೆಟ್ ಪೇಪರ್ ಇಲ್ಲದ ಕಾರಣ ಮತ್ತೆ ಪುತ್ತೂರಿನಿಂದ ಬ್ಯಾಲೆಟ್ ಪೇಪರ್ ತಂದು ಬಳಿಕ ಮತದಾನ ಪ್ರಕ್ರಿಯೆ ಆರಂಭಿಸಲಾಯಿತು.
ವಳಕಡಮ ಮತಗಟ್ಟೆಯಲ್ಲಿ ಮತ ಯಂತ್ರ ಕೈಕೊಟ್ಟ ಕಾರಣ 2 ಗಂಟೆ ತಡವಾಗಿ ಮತದಾನ ಆರಂಭಗೊಂಡಿದೆ.
ಈಶ್ವರಮಂಗಲ ಗಜಾನನ ವಿದ್ಯಾಸಂಸ್ಥೆಯಲ್ಲಿನ ಮತದಾನ ಕೇಂದ್ರದಲ್ಲಿ ಮತ ಯಂತ್ರದ ದೋಷದಿಂದ ಅರ್ಧ ಗಂಟೆ ತಡವಾಗಿ ಮತದಾನ ಆರಂಭಗೊಂಡಿತು.
ಪಟ್ಟೆ ಶಾಲೆಯಲ್ಲಿನ ಮತದಾನ ಕೇಂದ್ರದಲ್ಲಿ ಮತಯಂತ್ರದಲ್ಲಿನ ತೊಂದರೆಯಿಂದಾಗಿ 15 ನಿಮಿಷ ತಡವಾಗಿ ಮತದಾನ ಆರಂಭಗೊಂಡಿದೆ.
ಬನ್ನೂರು ಕೇಂದ್ರದಲ್ಲಿ ಮತಯಂತ್ರದ ತೊಂದರೆಯಿಂದಾಗಿ ಬೆಳಗ್ಗಿನ ವೇಳೆ ಆಗಮಿಸಿದ್ದ ಹಲವಾರು ಮತದಾರರು ಮತ ಚಲಾಯಿಸದೆ ಹಿಂದಿರುಗಿದರು. ಬಳಿಕ ಮತಯಂತ್ರವನ್ನು ಸರಿಪಡಿಸಿ ಮತದಾನವನ್ನು ಪ್ರಾರಂಭಿಸಲಾಗಿದೆ. ಬೆಳಗ್ಗಿನ ವೇಳೆ ಪುತ್ತೂರು ತಾಲೂಕಿನ ಬಹುತೇಕ ಮತಗಟ್ಟೆಗಳಲ್ಲಿ ಬಿರುಸಿನ ಮತದಾನವಾಗಿತ್ತು.
ಎಲ್ಲಾ ಕೇಂದ್ರಗಳಲ್ಲಿಯೂ ಮತದಾರು ಸರದಿಯಲ್ಲಿ ನಿಂತು ಮತದಾನ ಮಾಡಿದರು. 11 ಗಂಟೆಯ ವೇಳೆಗೆ ಸುಮಾರು 30 % ಮತದಾನವಾಗಿದೆ.
ಉಡುಪಿ:
ಬೆಳಗ್ಗೆ 9 ಗಂಟೆಯ ಸುಮಾರಿಗೆ ಉಡುಪಿ ಜಿಲ್ಲೆಯಲ್ಲಿ ಸುಮಾರು ಶೇ. 15 ಮತ ಚಲಾಯಿಸಲಾಗಿತ್ತು,
ಅತ್ರಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಮತದಾನ ನಡೆಯಿತು.
ಹಿರಿಯಡ್ಕ ನಿವಾಸಿ ಮುತ್ತು ಶೆಟ್ಟಿಗಾರ್ (75) ಅತ್ರಾಡಿಯಲ್ಲಿ ಮತ ಚಲಾಯಿಸಿದರು.
ಶಿಶೀಲ ಶೆರಿಗಾರ್ (82) ಹಿರಿಯಡ್ಕ ಸರಕಾರಿ ಕಾಲೇಜ್ ನಲ್ಲಿ ಮತ ಚಲಾಯಿಸಿದರು
ಮುತ್ತುಪಾಡಿ ಮೂಡು ದರ್ಕಸ್ತು ಎಸ್ ಟಿ ಕಾಲನಿಯ 30 ಕುಟುಂಬದ ಸುಮಾರು 174 ಮಂದಿ ಚುನಾವಣೆ ಬಹಿಷ್ಕರಿಸಿದ್ದು, ಮತದಾನ ಮಾಡದಿರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಮೂಲಭೂತ ಸೌಕರ್ಯ ನೀಡಬೇಕೇ ಎಂಬುದೇ ಅವರ ಬೇಡಿಕೆಯಾಗಿದೆ.
ಉಡುಪಿ ಶೇ. 36.51, ಕುಂದಾಪುರ ಶೇ. 35.41 ಹಾಗೂ ಕಾರ್ಕಳ ಶೇ. 41.78 ಒಟ್ಟು 37.89 ಮತದಾನವಾಗಿದೆ.