ರಾಷ್ಟ್ರಪತಿ ಪುರಸ್ಕಾರದ ರ್ಯಾಲಿಗೆ ಉಪ್ಪಿನಂಗಡಿಯ ವಿದ್ಯಾರ್ಥಿಗಳು
Update: 2016-02-20 16:03 IST
ಮಂಗಳೂರು, ಫೆ.16: ರಾಷ್ಟ್ರಪತಿ ಪುರಸ್ಕಾರ ನೀಡುವ ಬುಲ್ ಬುಲ್ಸ್‌ಗಳ ಗೋಲ್ಡನ್ ಆ್ಯರೊ ರ್ಯಾಲಿಗೆ ದ.ಕ. ಜಿಲ್ಲೆಯ ಉಪ್ಪಿನಂಗಡಿ ಸೈಂಟ್ ಮೇರೀಸ್ ಶಾಲೆಯ ಐವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಫೆ.21ರಿಂದ 23ರವರೆಗೆ ಹರ್ಯಾಣ ಜಿಲ್ಲೆಯ ಗಟ್‌ಫುರಿಯ ನ್ಯಾಶನಲ್ ಯೂತ್ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿರುವ ರಾಷ್ಟ್ರಪತಿ ಪುರಸ್ಕಾರದ ರ್ಯಾಲಿಗೆ ಜಿಲ್ಲೆಯಿಂದ ಉಪ್ಪಿನಂಗಡಿಯ ಸೈಂಟ್ ಮೇರೀಸ್ ಶಾಲೆಯ ವಿದ್ಯಾರ್ಥಿಗಳಾದ ದೀಪ್ತಿ ಪ್ರಭು, ಇನ್‌ಶ, ಫಾತಿಮಾ ನೈಝಾನಾ, ವಿನಿಶಾ ಗೋವಿಯಸ್, ಎ.ಎಸ್. ಲೋಬೊ ಹಾಗೂ ಅದೇ ಶಾಲಾ ಶಿಕ್ಷಕಿಯರಾದ ಮರಿಯಾ ಜಾನೆಟ್ ಹಾಗೂ ನಮಿತಾ ಡಿ ಸೋಜ ಆಯ್ಕೆಗೊಂಡಿದ್ದಾರೆ.