×
Ad

ಸೌದಿ ಅರೇಬಿಯ: ಮೂರುಕಡೆ ಅಪಘಾತದಲ್ಲಿ 8 ಮಂದಿ ಮೃತ್ಯು

Update: 2016-02-20 17:26 IST

  ರಿಯಾದ್: ದೇಶದಲ್ಲಿ ವಿವಿಧ ಭಾಗಗಳಲ್ಲಿ ನಡೆದ ವಾಹನಅಪಘಾತದಲ್ಲಿ ಎಂಟು ಮಂದಿ ಮೃತರಾಗಿದ್ದಾರೆ.ಅಸೀರ್ ಪ್ರಾಂತದಲ್ಲಿ ಎರಡು ಕಡೆ ಗುರುವಾರ ಅಪಘಾತ ನಡೆದಿದ್ದು ಕಮೀಸ್ ಅಲ್‌ಬಹರ್-ಮಹಾಯಿಲ್ ರಸ್ತೆಯಲ್ಲಿ ಗುರುವಾರ ರಾತ್ರಿ ಹನ್ನೊಂದು ಗಂಟೆ ವೇಳೆಗೆ ನಡೆದ ಮೊದಲ ಅಪಘಾತದಲ್ಲಿ ಎರಡು ಕಾರುಗಳು ಪರಸ್ಪರ ಢಿಕ್ಕಿಯಾಗಿ ಎರಡೂ ಕಾರುಗಳ ಚಾಲಕರು ಮೃತಪಟ್ಟಿದ್ದಾರೆ. ಮೂರು ಮಂದಿ ಗಾಯಗೊಂಡಿದ್ದರು. ಅಸೀರ್- ಅಬಹ ರಸ್ತೆಯಲ್ಲಿ ನಡೆದ ಇನ್ನೊಂದು ಅಪಘಾತದಲ್ಲಿ ಕಾರು ಟ್ರಕ್ ಗೆ ಢಿಕ್ಕಿಯಾಗಿ ನಾಲ್ಕು ಮಂದಿ ಮೃತರಾಗಿದ್ದಾರೆ. ಗುರುವಾರ ರಾತ್ರಿ ಹನ್ನೆರಡು ಗಂಟೆಗೆ ಈ ಅಪಘಾತ ಸಂಭವಿಸಿದೆ ಎಂದು ರೆಡ್‌ಕ್ರಸೆಂಟ್ ವಕ್ತಾರ ಅಹ್ಮದ್ ಇಬ್ರಾಹೀಂ ತಿಳಿಸಿದ್ದಾರೆ. ಹೋಂಡಾ ಅಕಾರ್ಡ್ ಕಾರು ಟ್ರಕ್‌ಗೆ ಢಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿತ್ತು. ಸಿವಿಲ್ ಡಿಫೆನ್ಸ್ ಬಂದ ನಂತರವೇ ಕಾರಿನೊಳಗಿಂದ ಮೃತದೇಹವನ್ನು ತೆಗೆಯಲು ಸಾಧ್ಯವಾಗಿತ್ತು. ಮೂರನೆ ಅಪಘಾತ ಅಲ್‌ಅಹ್ಸ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸಂಭವಿಸಿತ್ತು. ಮಕ್ಕಾ ರಸ್ತೆಯಲ್ಲಿ ಕಾರುಗಳು ಢಿಕ್ಕಿಯಾಗಿ ಇಬ್ಬರು ಯುವಕರು ಮೃತರಾಗಿದ್ದಾರೆ. ವಾಹನ ಚಲಾಯಿಸುವವರು ಸುರಕ್ಷಾ ನಿಯಮಗಳನ್ನು ಪಾಲಿಸಬೇಕು ಮತ್ತು ಅತಿವೇಗದಿಂದ ಚಲಾಯಿಸಬಾರದೆಂದು ಪೂರ್ವ ಪ್ರಾಂತದ ರೆಡ್‌ಕ್ರೆಸೆಂಟ್ ವಕ್ತಾರ ಫಹದ್ ಅಲ್‌ಗಾಂಭಿ ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News