ಮೂಡುಬಿದಿರೆ : ಮತದಾನ
ಪುತ್ತಿಗೆ ಜಿ.ಪಂ ಕ್ಷೇತ್ರ ಕೆ.ಪಿ ಸುಚರಿತ ಶೆಟ್ಟಿ ಮತದಾನ
ಮೂಡುಬಿದಿರೆ : ಪುತ್ತಿಗೆ ಜಿ.ಪಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಪಿ ಸುಚರಿತ ಶೆಟ್ಟಿ ಅವರು ಪಾಲಡ್ಕ ಗ್ರಾ.ಪಂ ವ್ಯಾಪ್ತಿಯ ಕಡಂದಲೆ ಗ್ರಾಮದ ಹಿರಿಯ ಪ್ರಾಥಮಿಕ ಕಡಂದಲೆ ಮೈನ್ ಶಾಲೆಯ 1ನೇ ವಾರ್ಡಿನಲ್ಲಿ ಮತ ಚಾಯಿಸಿದರು. ಮತದಾನ ಕೇಂದ್ರದ ಒಳಗಡೆ ಬೆಳಿಗ್ಗಿನಿಂದಲೇ ಕರೆಂಟ್ ಇಲ್ಲದಿದ್ದುದರಿಂದ ಗಲಿಬಿಲಿಗೊಂಡಿದ್ದ ಸುಚರಿತ ಶೆಟ್ಟಿ ಅವರು ಮೆಸ್ಕಾಂ ಇಲಾಖೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡ ನಂತರ ಕರೆಂಟ್ ಬೆಳಗಿತು.
ಯಾದವ ಶೆಟ್ಟಿ ಮತದಾನ
ಮೂಡುಬಿದಿರೆ : ಪುತ್ತಿಗೆ ಜಿ.ಪಂ ನ ಸಿಪಿಐ(ಎಂ) ಅಭ್ಯರ್ಥಿ ಯಾದವ ಶೆಟ್ಟಿ ಅವರು ಪುತ್ತಿಗೆ ಗ್ರಾಮದ ಸಂಪಿಗೆ ಅನುದಾನದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತನ್ನ ಪತ್ನಿ ಜತೆಗೂಡಿ ಬಂದು ಮತವನ್ನು ಚಲಾಯಿಸಿದರು. ಉಮಾನಾಥ ಕೋಟ್ಯಾನ್ : ಮಂಗಳೂರು ಕ್ಷೇತ್ರದಿಂದ ಮೂಡುಬಿದಿರೆಗೆ ಆಗಮಿಸಿ ಪುತ್ತಿಗೆ ಜಿ.ಪಂ ವ್ಯಾಪ್ತಿಯಲ್ಲಿ ವಾಸ್ತವ್ಯ ಹೂಡಿರುವ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್ ಅವರು ಹಂಡೇಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು.