ಪುಲಿಟ್ಝರ್ ಪುರಸ್ಕಾರ ವಿಜೇತೆ ನೆಲ್ಲಾ ಹಾರ್ಪರ್‌ಲೀ ನಿಧನ
ನ್ಯೂಯಾರ್ಕ್: ಪ್ರಸಿದ್ಧ ಅಮೆರಿಕನ್ ಕಾಂದಂಬರಿಕಾರ್ತಿ ನೆಲ್ಲಾ ಹಾರ್ಪರ್ ಲೀ ನಿಧನರಾಗಿದ್ದಾರೆ. 89 ವರ್ಷ ವಯಸ್ಸಾಗಿತ್ತು. ಜನಾಂಗೀಯತೆಯ ಆಧಾರದಲ್ಲಿ ಅವರು ಬರೆದಿದ್ದ ಟುಕಿಲ್ ಎಮೇಕಿಂಗ್‌ಬ್ಲೆಡ್ ಎಂಬಕಾದಂಬರಿಗೆ 1961ರಲ್ಲಿ ಪುಲಿಟ್ಝರ್ ಪುರಸ್ಕಾರ ದೊರಕಿತ್ತು.ಹಲವಾರು ಭಾಷೆಗಳಲ್ಲಿ ಅನುವಾದ ಗೊಂಡ ಗ್ರಂಥ ಇದಾಗಿದ್ದು ಮೂರುಕೋಟಿಗೂ ಅಧಿಕ ದರಕ್ಕೆ ಮಾರಲ್ಪಟ್ಟಿತ್ತು. 1960ರಲ್ಲಿ ಪ್ರಕಟವಾಗಿದ್ದ ಕಾದಂಬರಿಯ ಎರಡನೆ ಭಾಗವಾದ ಗೋಸೆಟ್ ಎ ವಾಚ್‌ಮೆನ್ 2015ರಲ್ಲಿ ಪ್ರಕವಾಗಿತ್ತು. 1926 ಎಪ್ರಿಲ್ 28 ಅಲಬಾಮದಲ್ಲಿ ನೆಲ್ಲಾ ಜನಿಸಿದ್ದರು.
ಅಲಬಾಮ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಾಂಗ ಮಾಡಿದ ಬಳಿಕ 1949ರಲ್ಲಿ ನ್ಯೂಯಾರ್ಕ್‌ಗೆ ವಾಸ್ತವ್ಯಬದಲಿಸಿದ್ದ ಅವರು ಏರ್‌ಲೈನ್ ರಿಸರ್ವೇಶನ್ ಕ್ಲಾರ್ಕ್ ಆಗಿ ಕೆಲಸಮಾಡುತ್ತಿದ್ದಾಗ ಟು ಕಿಲ್ ಮೇಕಿಂಗ್ ಬ್ಲಡ್‌ನ್ನು ರಚಿಸಿದ್ದರು. ಇದರ ಚಲನ ಚಿತ್ರ ರೂಪಾಂತರವೂ ಯಶಸ್ವಿಯಾಗಿತ್ತು. 2007ರಲ್ಲಿ ಅವರನ್ನು ಪಕ್ಷವಾತ ರೋಗ ಬಾಧಿಸಿದ ನಂತರ ಅವರು ವಿಶ್ರಾಂತಿಯಲ್ಲಿದ್ದರು.