×
Ad

ರೋಂ: ಪ್ರಸಿದ್ಧ ಇಟಲಿ ಕಾದಂಬರಿಕಾರ ಉಂಬಾರ್ಟೋ ಎಕ್ಕೊ(84) ನಿಧನ

Update: 2016-02-20 19:24 IST

ರೋಂ: ಪ್ರಸಿದ್ಧ ಇಟಲಿ ಕಾದಂಬರಿಕಾರ ಉಂಬಾರ್ಟೋ ಎಕ್ಕೊ(84) ನಿಧನರಾಗಿದ್ದಾರೆ. ಕ್ಯಾನ್ಸರ್‌ರೋಗ ಪೀಡಿತರಾಗಿದ್ದ ಅವರು ನಿಧನವಾದ ಸುದ್ದಿಯನ್ನು ಬಿಬಿಸಿ ವರದಿಮಾಡಿದೆ. ಉತ್ತರ ಇಟಲಿಯ ಸ್ವಗೃಹದಲ್ಲಿ ಅವರು ನಿಧನಹೊಂದಿದ್ದಾರೆ. ನೇಮ್ ಆಫ್ ದ ರೋಸ್, ದಿ ಹೈಲ್ಯಾಂಡ್ ಆಫ್ ದ ಡೆ ಬಿಫೋರ್ ಮುಂತಾದ ಅವರ ಕಾದಂಬರಿಗಳು ಬಹು ಜನಪ್ರಿಯವಾಗಿದ್ದವು.

 ಇಟಲಿಯ ಅಲೆಗ್ಸಾಂಡ್ರಾ ಎಂಬ ಸಣ್ಣ ಪಟ್ಟಣದಲ್ಲಿ 1932ರಲ್ಲಿ ಜನಿಸಿದ್ದರು. ತನ್ನ ಭಾವನಾ ಲೋಕದ ಮೇಲೆ ತನ್ನ ಅಜ್ಜಿ ಬಹಳ ಪ್ರಭಾವವನ್ನು ಬೀರಿದ್ದಾರೆ ಎಂದು ಬರೆದಿದ್ದಾರೆ. ಕಾನೂನು ಕಲಿಯಲು ಟುರಿನ್ ವಿಶ್ವವಿದ್ಯಾನಿಲಯಕ್ಕೆ ಸೇರಿದ್ದರು ಅದನ್ನು ತೊರೆದು ಮಧ್ಯಕಾಲದ ತತ್ವಜ್ಞಾನ ಹಾಗೂ ಸಾಹಿತ್ಯವನ್ನು ಅಭ್ಯಸಿಸಿದ್ದರು. 1954ರಲ್ಲಿ ಅವರಿಗೆ ಡಾಕ್ಟರೇಟ್ ಲಭಿಸಿತ್ತು. ಇಟಲಿ ಸರಕಾರಿ ಟಿವಿಯಲ್ಲಿ ಕೆಲಸವನ್ನು ಪ್ರಾರಂಭಿಸಿದ್ದ ಅವರು ಕಾಲಮಿಸ್ಟ್ ಆಗಿಯೂ ಪ್ರಸಿದ್ಧರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News