×
Ad

206 ಮಂದಿ ಕೊಂಕಣಿ ಸಾಹಿತಿಗಳಿಗೆ ಗುರುತಿನ ಪತ್ರ ವಿತರಣೆ

Update: 2016-02-20 21:01 IST

ಮಂಗಳೂರು, ಫೆ. 20: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ 206 ಮಂದಿ ಕೊಂಕಣಿ ಸಾಹಿತಿ ಹಾಗೂ ಕಲಾವಿದರಿಗೆ ಗುರುತು ಪತ್ರವನ್ನು ಇಂದು ನಗರದ ಡಾನ್ ಬಾಸ್ಕೊ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿಯ ಅಧ್ಯಕ್ಷ ರಾಯ್ ಕ್ಯಾಸ್ತೆಲಿನೊ, ಕೊಂಕಣಿಯ ಸಾಹಿತಿ ಹಾಗೂ ಕಲಾವಿದರು ಸರಕಾರದ ಸೌಲಭ್ಯ ಪಡೆಯಲು ಈ ಗುರುತುಪತ್ರ ನೆರವಾಗಲಿದೆ ಎಂದರು.

ಮಣಿಪಾಲ್ ಸಮೂಹ ಸಂಸ್ಥೆಯ ಇನ್ಶೂರೆನ್ಸ್ ಎಂಇಎಂಜಿ ಜನರಲ್ ಮೆನೇಜರ್ ಎಸ್.ಯು. ಶ್ರೀಪತಿ ವಿಮಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕುಡುಬಿ ಸಮುದಾಯದ ಹಿರಿಯ ಕಲಾವಿದ ಬಾಬು ಗೌಡ ಉಪಸ್ಥಿತರಿದ್ದರು. ಡೊಲ್ಲಾ ಮಂಗ್ಳೂರ್ ಸ್ವಾಗತಿಸಿದರು. ಜೂಡಿತ್ ಡಿಸೋಜ ವಂದಿಸಿದರು. ಡೊಲ್ಫಿ ಸಲ್ಡಾನ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಅಕಾಡೆಮಿಯ 8 ಪುಸ್ತಕಗಳ ಬಿಡುಗಡೆ ನಡೆಯಿತು.
ಗೊಂಯ್ ಸಾಂಡುನ್ ಆಯ್ಲಿ ಮಾಂಯ್- ಜೊಕಿಂ ಪಿರೇರಾ (ಗುಮಟೆ ಹಾಡುಗಳು. ಸುಧಾರಿತ ಪುನರ್ ಮುದ್ರಣ), ಕರ್ವಾಲೊ- ಲಿಲ್ಲಿ ಮಿರಾಂದಾ (ಅನುವಾದಿತ ಕಾದಂಬರಿ), ವಾಸರಿಂತು ಹಾಂವ್- ಗೀತಾ ಸಿ. ಕಿಣಿ (ವೈವಿಧ್ಯಮಯ ಅಡುಗೆ), ಆಮಾಶೆೆಚೆ ಆದ್ಲಿ ರಾತ್- ರೊನ್ ಮಾಯ್ಕಲ್ ಆಂಜೆಲೊರ್ (ಕಥಾ ಸಂಗ್ರಹ), ಭಾಡ್ಯಾಚಿ ಬಾಯ್ಲಾ- ಸಿಜ್ಯೆಸ್ ತಾಕೊಡೆ (5 ಕಿರು ನಾಟಕಗಳು), ಮ್ಹಾಕಾ ಜಿಯೆಂವ್ಕ್ ಸೊಡಾ- ರೊನ್ ರೊಚ್ ಕಾಸ್ಸಿಯಾ (ಕಾದಂಬರಿ), ವಿದೂಷಕ್- ರಿಚ್ಚಿ ಜೋನ್ ಪಾಯ್ಸಿ (ವಿಡಂಬನೆಗಳ ಸಂಗ್ರಹ) ಮತ್ತು ಕುಡ್ಮ್ಯಾಲಿ ಗುಮ್ಟಾಂ ಆನಿ ತೊಣಿಯಾಂ ಪೊದಾಂ-  ಎಂ. ಗೋಪಾಲ ಗೌಡ (ಕುಡುಮಿ ಗುಮಟೆ ಹಾಡು ಹಾಗೂ ಕೋಲಾಟ ಪದಗಳ ಸುಧಾರಿತ ಪುನರ್ ಮುದ್ರಣ) ಅವರ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News