ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜಾಮೀನು
Update: 2016-02-20 21:42 IST
ಮೂಡುಬಿದಿರೆ : ಇಲ್ಲಿನ ಹೂವಿನ ವ್ಯಾಪಾರಿ, ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.
ಗಂಟಾಲ್‌ಕಟ್ಟೆಯ ಬದ್ರುದ್ದೀನ್ ಮತ್ತು ಇಂತಿಯಾಸ್ ಜಾಮೀನು ಪಡೆದುಕೊಂಡ ಆರೋಪಿಗಳು. 2015ರ ಅ.9ರಂದು ಮೂಡುಬಿದಿರೆಯ ಸಮಾಜ ಮಂದಿರದ ಬಳಿ ಇರುವ ಹೂವಿನ ಅಂಗಡಿಯ ವ್ಯಾಪಾರಿ ಪ್ರಶಾಂತ್ ಪೂಜಾರಿಯನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮಾರಾಕಾಯುಧಗಳಿಂದ ಕಡಿದು ಕೊಲೆ ಮಾಡಿದ್ದು, ಈ ಪ್ರಲರಣಕ್ಕೆ ಸಂಬಂಧಿಸಿದಂತೆ ಪೊಲೀಸರು 11 ಜನರನ್ನು ಜೈಲಿಗಟ್ಟಿದ್ದರು. ಈ ಆರೋಪಿಗಳಲ್ಲಿ ಗಂಟಾಲ್‌ಕಟ್ಟೆ ನಿವಾಸಿಗಳಾದ ಬದ್ರುದ್ದೀನ್‌ನನ್ನು ಪೊಲೀಸರು ಮನೆಯಿಂದ ವಶಕ್ಕೆ ಪಡೆದುಕೊಂಡರೆ, ಇಂತಿಯಾಸ್ ದುಬೈಗೆ ತೆರಳಲು ಮುಂಬೈ ಏರ್‌ಪೋರ್ಟ್‌ನಲ್ಲಿದ್ದಾಗ ವಶಕ್ಕೆ ತೆಗೆದುಕೊಂಡಿದ್ದರು.
ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ಇದೀಗ ಜಾಮೀನು ನೀಡಿದೆ.
ಆರೋಪಿಗಳ ಪರ ಹೈಕೋರ್ಟ್ ವಕೀಲ ಅಸ್ಮತ್ ಪಾಷಾ ವಾದಿಸಿದ್ದರು.