ಮಂಗಳೂರು : ‘ವಿಶ್ವಾಸ್ ಗ್ರೀನ್ ವೀವ್’ ನೂತನ ವಸತಿ ಸಮುಚ್ಚಯ ಉದ್ಘಾಟನೆ
ಮಂಗಳೂರು, ಫೆ.20: ವಿಶ್ವಾಸ್ ಬಾವ ಬಿಲ್ಡರ್ಸ್ ವತಿಯಿಂದ ನಗರದ ಗೋರಿಗುಡ್ಡದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನೂತನವಾಗಿ ನಿರ್ಮಾಣಗೊಂಡಿರುವ ‘ವಿಶ್ವಾಸ್ ಗ್ರೀನ್ ವೀವ್’ ವಸತಿ ಸಮುಚ್ಚಯ ಇಂದು ಉದ್ಘಾಟನೆಗೊಂಡಿತು.
ಲೊರೆಟ್ಟೊ ಚರ್ಚ್‌ನ ನಿವೃತ್ತ ಧರ್ಮಗುರು ಫಾ.ಓಸ್ವಾಲ್ಡ್ ಮೊಂತೆರೊ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಉದ್ಯಮಿ ಹೆನ್ರಿ ಡಿಸೋಜ ಲಾಬಿಯ ಉದ್ಘಾಟನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಎನ್ಮಾರ್ಕ್ ಬಿಲ್ಡರ್ಸ್‌ನ ನೂರ್ ಮುಹಮ್ಮದ್, ಆರ್ಕಿಟೆಕ್ಟ್ ದಾಮೋದರ ಶೆಣೈ, ಚಾರ್ಟರ್ಡ್ ಅಕೌಂಟೆಂಟ್ ನಿತಿನ್ ಶೆಟ್ಟಿ, ಸ್ಟ್ರಕ್ಚರಲ್ ಎಂಜಿನಿಯರ್ ಆನಂದ ಭಟ್, ಉದ್ಯಮಿ ಗೋಪಾಲ ಸುವರ್ಣ, ಸಿಂಡಿಕೇಟ್ ಬ್ಯಾಂಕ್ ಅಧಿಕಾರಿ ಅಬ್ದುಲ್ ಹಖ್, ಭಾಸ್ಕರ್ ಕುಲಶೇಖರ, ವಿಶ್ವಾಸ್ ಎಸ್ಟೇಟ್ಸ್‌ನ ಪಾಲುದಾರ ಸುಲೈಮಾನ್ ಶೇಖ್, ಬೆಸೆಂಟ್ ಕಾಲೇಜಿನ ಉಪನ್ಯಾಸಕ ಸತೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಫಾ.ಓಸ್ವಾಲ್ಡ್ ಮೊಂತೆರೊ ಅವರು, ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿನ ವಿಶ್ವಾಸ್ ಬಾವ ಬಿಲ್ಡರ್ಸ್ ಸೇವೆಯನ್ನು ಶ್ಲಾಘಿಸಿದರು. ಸಂಸ್ಥೆಯಿಂದ 36 ಯೋಜನೆಗಳು ಪೂರ್ಣಗೊಂಡಿದ್ದು, 16 ಯೋಜನೆಗಳು ಪ್ರಗತಿಯಲ್ಲಿವೆ ಎಂದರು. ಅವರ ಮುಂದಿನ ಯೋಜನೆಗಳ ಮೂಲಕ ಜನರಿಗೆ ಇನ್ನೂ ಹೆಚ್ಚಿನ ಸೇವೆ ಒದಗುವಂತಾಗಲಿ ಎಂದು ಶುಭ ಹಾರೈಸಿದರು.
ವಿಶ್ವಾಸ್ ಬಾವ ಬಿಲ್ಡರ್ಸ್ ಮತ್ತು ವಿಶ್ವಾಸ್ ಎಸ್ಟೇಟ್ಸ್‌ನ ಪಾಲುದಾರ ಅಶ್ರಫ್ ಜಿ.ಬಾವ ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಆಡಳಿತ ನಿರ್ದೇಶಕ ಅಬ್ದುಲ್ ರವೂಫ್ ಪುತ್ತಿಗೆ ವಂದಿಸಿದರು.