×
Ad

ಕುಂಬಳೆ: ಮಾನವೀಯ ಐಕ್ಯ ಸಂದೇಶ ಯಾತ್ರೆಗೆ ಚಾಲನೆ

Update: 2016-02-20 23:19 IST

ಕಾಸರಗೋಡು, ಫೆ..20: ಭಯಮುಕ್ತ ಸಮಾಜ ಯುವಕರ ಕೈಯಲ್ಲಿ ಎಂಬ ಘೋಷಣೆಯೊಂದಿಗೆ ಯುವ ಜನತಾದಳ ರಾಜ್ಯ ಅಧ್ಯಕ್ಷ ಸಲೀಂ ಮಡವೂರು ನೇತೃತ್ವದ ಮಾನವೀಯ ಐಕ್ಯ ಸಂದೇಶ ಯಾತ್ರೆ ಶುಕ್ರವಾರ ಸಂಜೆ ಕುಂಬಳೆಯಿಂದ ಪ್ರಯಾಣ ಬೆಳೆಸಿತು.
ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಾವೇದ್ ರೋಝ್ ನಾಯಕರಿಗೆ ಧ್ವಜ ಹಸ್ತಾಂತರಿಸುವುದರೊಂದಿಗೆ ಚಾಲನೆ ನೀಡಿದರು.
ರಾಜ್ಯ ಉಪಾಧ್ಯಕ್ಷ ಪಿ.ಕೆ ಪ್ರವೀಣ್ ಅಧ್ಯಕ್ಷತೆ ವಹಿಸಿದ್ದರು.
ಮಂಜೇಶ್ವರ ಶಾಸಕ ಪಿ.ಬಿ.ಅಬ್ದು ರ್ರಝಾಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಕೆ ಶ್ರೀಧರನ್, ಜೆಡಿಯು ರಾಜ್ಯ ಹಿರಿಯ ನಾಯಕ ಪಿ. ಕೋರನ್ ಮಾಸ್ಟರ್, ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಕುಂಞಾಲಿ, ಎ. ಭಾಸ್ಕರನ್, ಮನಯತ್ ಚಂದ್ರನ್, ಎ.ವಿ. ರಾಮಕೃಷ್ಣನ್, ಸಿದ್ದೀಕ್ ಅಲಿ ಮೊಗ್ರಾಲ್, ಮುಹಮ್ಮದ್ ಕುಂಞಿ ಮಾಸ್ಟರ್, ಆಹ್ಮದಾಲಿ ಕುಂಬಳೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News