ಕಾಸರಗೋಡು: ಕರ್ನಾಟಕ ರಾಜ್ಯ ಸಅದೀಸ್ ಪುನರ್ರಚನೆ
ಕಾಸರಗೋಡು, ಫೆ.20: ಜಾಮಿಅ ಸಅದಿಯ್ಯ ಅರಬಿಯಾದ 46ನೆ ವಾರ್ಷಿಕ ಹಾಗೂ ಸನದುದಾನ ಮಹಾ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ಮಜ್ಲಿಸುಲ್ ಉಲಮಾ ಅಸ್ಸಅದಿಯ್ಯೀನ್ ಸಂಘಟನೆಯ ಮಹಾಸಭೆ ನಡೆಯಿತು. ರಾಜ್ಯಾಧ್ಯಕ್ಷ ಎಂ.ಪಿ.ಎಂ.ಅಶ್ರಫ್ ಸಅದಿ ಮಲ್ಲೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಎನ್.ಕೆ.ಎಂ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಿದರು. ಕೆಸಿಎಫ್ ಪ್ರತಿನಿಧಿ ಯೂಸುಫ್ ಸಅದಿ ಅಯ್ಯಂಗೇರಿ, ಎಸ್ಸೆಸ್ಸೆಫ್ ಮಾಜಿ ರಾಜ್ಯಾಧ್ಯಕ್ಷ ಹಫೀಳ್ ಸಅದಿ ಕೊಳಕೇರಿ, ರಾಜ್ಯ ವಕ್ಫ್ ಬೋರ್ಡ್ ಉಲಮಾ ಕೌನ್ಸಿಲ್ ಸದಸ್ಯ ಇಸ್ಮಾಯೀಲ್ ಸಅದಿ ಕಿನ್ಯಾ, ಎಸ್ಸೆಸ್ಸೆಫ್ ದ.ಕ.ಜಿಲ್ಲಾಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ನಾವೂರು, ಜಂಇಯ್ಯತುಲ್ ಮುಅಲ್ಲಿಮೀನ್ ನಾಯಕ ಇಸ್ಮಾಯೀಲ್ ಸಅದಿ ಉರುಮಣೆ ಉಪಸ್ಥಿತರಿದ್ದರು.
ನೂತನ ಸಾಲಿನ ಅಧ್ಯಕ್ಷರಾಗಿ ಎಂ.ಪಿ.ಎಂ.ಅಶ್ರಫ್ ಸಅದಿ ಮಲ್ಲೂರು, ಪ್ರಧಾನ ಕಾರ್ಯದರ್ಶಿಯಾಗಿ ಹಫೀಳ್ ಸಅದಿ ಕೊಳಕೇರಿ ಕೊಡಗು, ಕೋಶಾಧಿಕಾರಿಯಾಗಿ ಮುಸ್ತಫಾ ಸಅದಿ ಶಿರ್ವ, ಉಪಾಧ್ಯಕ್ಷರಾಗಿ ಕುಂಞಿಕೋಯ ತಂಙಳ್ ಸಅದಿ ಸುಳ್ಯ, ಎನ್.ಕೆ.ಎಂ.ಶಾಫಿ ಸಅದಿ ಬೆಂಗಳೂರು, ಇಸ್ಮಾಯೀಲ್ ಸಅದಿ ಕಿನ್ಯ, ಬಶೀರ್ ಸಅದಿ ವೀರಾಜಪೇಟೆ, ಜಬ್ಬಾರ್ ಸಅದಿ ತರೀಕೆರೆ. ಕಾರ್ಯದರ್ಶಿಗಳಾಗಿ ಅಹ್ಮದ್ ಶರೀಫ್ ಸಅದಿ ಕಿಲ್ಲೂರು, ತ್ವಾಹಾ ಸಅದಿ ಚಿಕ್ಕಮಗಳೂರು, ಮುಹಮ್ಮದಾಲಿ ಸಅದಿ ಉಡುಪಿ, ಸಂಶುದ್ದೀನ್ ಸಅದಿ ಹಾಸನ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯಾಕೂಬ್ ಸಅದಿ ನಾವೂರು, ಹುಸೈನ್ ಸಅದಿ ಹುಬ್ಬಳ್ಳಿ, ರಫೀಕ್ ಸಅದಿ ಶಿವಮೊಗ್ಗ, ಲತೀಫ್ ಸಅದಿ ಶಿವಮೊಗ್ಗ, ಉಮರ್ ಸಅದಿ ಗದಗ, ಇಬ್ರಾಹೀಂ ಸಅದಿ ಮೈಸೂರು, ಇಸ್ಮಾಯೀಲ್ ಸಅದಿ ಉರುಮಣೆ, ಹಸೈನಾರ್ ಸಅದಿ ಅಯ್ಯಂಗೇರಿ, ಹನೀಫ್ ಸಅದಿ ನಾವುಂದ, ರಝಾಕ್ ಸಅದಿ ಬೆಂಗಳೂರು, ಅಬ್ದುಲ್ ಹಮೀದ್ ಸಅದಿ ಬೇಂಗಿಲ, ಅಬ್ದುರ್ರಹ್ಮಾನ್ ಸಅದಿ ಮಜೂರು, ಕಬೀರ್ ಸಅದಿ ಹೊಸೂರು, ಅಲೀ ಸಅದಿ ಮೈಸೂರು ಆಯ್ಕೆಯಾದರು.