×
Ad

ಗೋಳಿಕಟ್ಟೆ: ಬ್ಯಾರಿಕೇಡ್ ಅಳವಡಿಕೆ

Update: 2016-02-20 23:24 IST


ಪುತ್ತೂರು, ಫೆ.20: ಪರ್ಲಡ್ಕ ಹಯಾತುಲ್ ಇಸ್ಲಾಂ ದಫ್ ಸಮಿತಿ ವತಿಯಿಂದ ನೀಡಲಾದ ಬ್ಯಾರಿಕೇಡ್‌ನ್ನು ಗೋಳಿಕಟ್ಟೆ ಮುಹಿಯುದ್ದೀನ್ ಜುಮಾ ಮಸೀದಿ ಮುಂಭಾಗದ ರಸ್ತೆಗೆ ಅಳವಡಿಸಲಾಯಿತು. ಮಸೀದಿಯ ಮಾಜಿ ಅಧ್ಯಕ್ಷ ಹಾಜಿ ಉಮರ್ ಕೆ.ಎಚ್. ಉದ್ಘಾಟಿಸಿದರು. ಅಧ್ಯಕ್ಷ ಶಾಬಾನ್ ಕೆ. ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಹಾಜಿ ಎ.ಎಸ್. ಮುಹಮ್ಮದ್ ಅಲಿ ದಾರಿಮಿ ದುಆ ಮಾಡಿದರು.
ಸ್ಥಳೀಯ ಪ್ರಮುಖರಾದ ಅಬ್ದುರ್ರಶೀದ್ ಹಾಜಿ ಪರ್ಲಡ್ಕ, ಅಶ್ರಫ್ ಗೋಳಿಕಟ್ಟೆ, ಮಜೀದ್, ಮೊಯ್ದಿನ್ ಬಿ.ಕೆ., ಉಮರ್ ಶೀತಲ್, ಹಸೈನಾರ್ ಹಾಜಿ, ಲತೀಫ್ ಪರ್ಲಡ್ಕ, ಅಬ್ದುಲ್ ಅಝೀಝ್, ಅಯ್ಯೂಬ್, ಇಬ್ರಾಹೀಂ ಗೋಳಿಕಟ್ಟೆ, ಕಮರಲಿ, ಹಾಶಿಂ, ಬಶೀರ್, ಸಂಶುದ್ದೀನ್ ಹಾಜಿ ಗೋಳಿಕಟ್ಟೆ, ಸುಹೈಲ್ ಗೋಳಿಕಟ್ಟೆ, ಮುಝಮ್ಮಿಲ್, ಮುಹಮ್ಮದ್ ಅನಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News