×
Ad

ಮಂಗಳೂರು : ಶಾಂತಿಯುತವಾಗಿ ನಡೆದ ಮತದಾನ

Update: 2016-02-20 23:54 IST

 ಮಂಗಳೂರು,ಫೆ.20: ಸ್ಥಳೀಯ ತಾಲೂಕಿನ 10 ಜಿ.ಪಂ ಕ್ಷೇತ್ರಗಳು ಮತ್ತು 39 ತಾ.ಪಂ ಕ್ಷೇತ್ರಗಳಿಗೆ ಚುನಾವಣೆ ಶಾಂತಿಯುತವಾಗಿ ನಡೆಯಿತು.  ದ.ಕ ಜಿಲ್ಲಾ ಪಂಚಾಯತ್‌ಗೆ ಮಂಗಳೂರು ತಾಲೂಕಿನಿಂದ 2010ರಲ್ಲಿ ಹತ್ತು ಕೇತ್ರಗಳಿದ್ದು ಕ್ಷೇತ್ರ ಪುನರ್ವಿಂಗಡಣೆಯ ನಂತರವೂ ಮಂಗಳೂರು ತಾಲೂಕಿನಲ್ಲಿ ಹತ್ತು ಕೇತ್ರವು ಉಳಿದುಕೊಂಡಿದೆ. ಕಿನ್ನಿಗೋಳಿ, ಪುತ್ತಿಗೆ, ಶಿರ್ತಾಡಿ, ಕಟೀಲು ಬಜಪೆ, ಎಡಪದವು ಗುರುಪುರ, ನೀರುಮಾರ್ಗ, ಕೋಣಾಜೆ,ಸೋಮೇಶ್ವರ ಜಿ.ಪಂ ಕ್ಷೇತ್ರಗಳಿಗೆ ಚುನಾವಣೆಯು ನಡೆದಿದೆ. 2010ರಲ್ಲಿ ಹತ್ತು ಕ್ಷೇತ್ರದಲ್ಲಿ ಬಿಜೆಪಿ 6 ಸ್ಥಾನವನ್ನು, ಕಾಂಗ್ರೆಸ್ 4 ಸ್ಥಾನವನ್ನು ಪಡೆದುಕೊಂಡಿತ್ತು.

ಮಂಗಳೂರು ತಾಲೂಕು ಪಂಚಾಯತ್‌ಗೆ 2010ರಲ್ಲಿ 37 ಕ್ಷೇತ್ರಗಳಿದ್ದರೆ ಈ ಬಾರಿ ಕ್ಷೇತ್ರ ಪುನರ್ವಿಂಗಡಣೆಯ ನಂತರ 39 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. 2010ರಲ್ಲಿ 37 ಕ್ಷೇತ್ರಗಳಲ್ಲಿ ಬಿಜೆಪಿ 19 ಸ್ಥಾನಗಳನ್ನು, ಕಾಂಗ್ರೆಸ್ 18 ಸ್ಥಾನಗಳನ್ನು ಗಳಿಸಿಕೊಂಡಿತ್ತು. ಬಾಕ್ಸ್ ಮಾಡಬಹುದು:

ನಿಧಾನಗತಿಯ ಮತದಾನ

  ಮಂಗಳೂರು ತಾಲೂಕಿನಲ್ಲಿ ಬೆಳಗ್ಗಿನಿಂದಲೇ ಮತದಾರರು ತೀರಾ ಕಡಿಮೆ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸುವ ಮೂಲಕ ನಿಧಾನಗತಿಯಲ್ಲಿ ಮತದಾನ ಪ್ರಕ್ರಿಯೆ ಕಂಡು ಬಂತು. ಬೆಳಿಗ್ಗೆ 11 ರ ಸುಮಾರಿಗೆ 29.01 ಶೇಕಡ ಮತದಾನವಾಗಿತ್ತು. ಮದ್ಯಾಹ್ನ 1 ಗಂಟೆಯ ಸುಮಾರಿಗೆ 43.08 ಶೇಕಡ ಮತದಾನವಾದರೆ 3 ಗಂಟೆಗೆ 55.95 ಶೇಕಡ ಮತದಾನವಾಗಿತ್ತು. ವಿಳಂಬ: ಚುನಾವಣಾ ಆಯೋಗ ಚುನಾವಣೆಗೆ ಎಲ್ಲಾ ರೀತಿಯ ಸಿದ್ದತೆ ನಡೆಸಿದ್ದರೂ ಕೆಲವೆಡೆ ಮತಯಂತ್ರ ದೋಷದಿಂದ ಚುನಾವಣೆ ನಿಗದಿತ ಸಮಯಕ್ಕೆ ಆರಂಭವಾಗಲಿಲ್ಲ. ಕಟೀಲು ಜಿ.ಪಂ ಕ್ಷೇತ್ರದ ನಡುಗೋಡು ಬೂತ್ ಸಂಖ್ಯೆ 117ರಲ್ಲಿ ಮತಯಂತ್ರ ದೋಷದಿಂದ ಚುನಾವಣೆ ವಿಳಂಬವಾಗಿ ಆರಂಭವಾಯಿತು. ಅಡ್ಯಾರ್‌ನಲ್ಲಿ ಮತಯಂತ್ರ ದೋಷದ ಪರಿಣಾಮ ಚುನಾವಣೆ ಅರ್ಧ ಗಂಟೆ ವಿಳಂಬವಾಗಿ ನಡೆಯಿತು. ಎಡಪದವು ಜಿ.ಪಂ ಕ್ಷೇತ್ರದ ಕುಪ್ಪೆಪದವು ತಾ.ಪಂ ಕ್ಷೇತ್ರ ವ್ಯಾಪ್ತಿಯ ಕಲ್ಲಾಡಿ ಬೂತ್ ನಂ.188ರಲ್ಲಿ ಮತಯಂತ್ರ ದೋಷದಿಂದ 15 ನಿಮಿಷ ಚುನಾವಣೆ ವಿಳಂಬವಾಗಿ ಆರಂಭವಾಯಿತು.

342 ಮತಗಟ್ಟೆಗಳಲ್ಲಿ ಚುನಾವಣೆ

  ಮಂಗಳೂರು ತಾಲೂಕಿನಲ್ಲಿ 307402 ಮತದಾರರಿದ್ದು 342 ಮತಗಟ್ಟೆಗಳಲ್ಲಿ ಇಂದು ಚುನಾವಣೆ ನಡೆದಿದೆ. ಜಿ.ಪಂ ನ ಹತ್ತು ಕ್ಷೇತ್ರಗಳಿಗೆ 36 ಅಭ್ಯರ್ಥಿಗಳು, ತಾಲೂಕು ಪಂಚಾಯತ್‌ನ 39 ಕ್ಷೇತ್ರಗಳಿಗೆ 115 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News