×
Ad

ಕಿನ್ನಿಗೋಳಿ: ಉಚಿತ ಹುಚ್ಚುನಾಯಿ ನಿರೋಧಕ ಲಸಿಕಾ ಕಾರ್ಯಕ್ರಮ

Update: 2016-02-22 13:22 IST

ಕಿನ್ನಿಗೋಳಿ, ಫೆ.22: ಪಶು ಸಂಗೋಪನಾ ಇಲಾಖೆ ಹಾಗೂ ನವ ಚೈತನ್ಯ ಫ್ರೆಂಡ್ಸ್ ಗುತ್ತಕಾಡು ಇವುಗಳ ಸಂಯುಕ್ತ ಆಶ್ರಯದಲ್ಲಿ 3ನೆ ವರ್ಷದ ಉಚಿತ ಹುಚ್ಚುನಾಯಿ ನಿರೋಧಕ ಲಸಿಕಾ ಕಾರ್ಯಕ್ರಮ ಗುತ್ತಕಾಡು ಬಸ್ ನಿಲ್ದಾಣದ ಬಳಿ ಹಾಗೂ ಕಿನ್ನಿಗೋಳಿ ಪರಿಸರದ ಹಲವೆಡೆ ರವಿವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಿನ್ನಿಗೋಳಿ ಪ್ರಧಾನ ಗ್ರಾಮ ಯೋಜನೆಯ ಸಹಾಯಕ ನಿರ್ದೇಶಕ ಡಾ. ಕೆ.ವೈ. ಸತ್ಯಶಂಕರ್ , ಜಾಗೃತರಗುವುದು ಉತ್ತಮ. ನಾಯಿಗಳಿಗೆ ಮಾತ್ರವಲ್ಲದೆ, ದನಗಳಿಗೂ ರೇಬಿಸ್ ಲಸಿಕೆ ನೀಡುವ ಕಾರ್ಯಕ್ರಮ ಅನುಷ್ಠಾನಕ್ಕೆ ತರಬೇಕೆಂದು ಸರಕಾರವನ್ನು ಈ ಸಂದರ್ಭ ಅವರು ಒತ್ತಾಯಿಸಿದರು.


ಕಾರ್ಯಕ್ರಮವನ್ನು ಕಿನ್ನಿಗೊಳಿ ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಉದ್ಘಾಟಿಸಿದರು. ಕಿನ್ನಿಗೊಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಫಿಲೊಮಿನಾ ಸಿಕ್ವೇರಾ, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಕಿನ್ನಿಗೋಳಿ ಗ್ರಾ.ಪಂ. ಸದಸ್ಯೆ ಶಾಮಲಾ ಹೆಗ್ಡೆ, ನವ ಚೈತನ್ಯ ಫ್ರೆಂಡ್ಸ್‌ನ ಗೌರಾವಾಧ್ಯಕ್ಷ ಚಂದ್ರಶೇಖರ್, ಬಾಲಕೃಷ್ಣ, ಮೀರಾ ಸಾಹೇಬ್, ನಾರಾಯಣ ಪೂಜಾರಿ, ದಿವಾಕರ ಕರ್ಕೇರ, ಕೃಷ್ಣ ಅಂಚನ್, ನಕುಲ್, ಕಪಿಲ, ಸಂಘದ ಅಧ್ಯಕ್ಷ ದಿನೇಶ್ ಶೆಟ್ಟಿ ಮೊದಲದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News