×
Ad

ಫೆ.22ರಿಂದ ಬಜ್ಪೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ

Update: 2016-02-22 14:39 IST

ಬಜ್ಪೆ, ಫೆ.22: ಶ್ರೀ ನಾಗಬ್ರಹ್ಮ ದೇವಸ್ಥಾನ ಸುರಭೀಕಟ್ಟೆ ಕೊಲಂಬೆ ಇಲ್ಲಿನ ನಾಗದೇವರಿಗೆ ಬ್ರಹ್ಮಕಲಶಾಭಿಷೇಕವು ಫೆ.22 ರಿಂದ 25ರ ವರೆಗೆ ವಿಜೃಂಭನೆಯಿಂದ ನಡೆಯಲಿದೆ ಎಂದು ನಾಗಬ್ರಹ್ಮ ದೆವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಪ್ರಸಾದ್ ಹೆಗ್ಡೆ ಹೇಳಿದರು.


ಬಜ್ಪೆ ನಾಗಬ್ರಹ್ಮ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಭಕ್ತಾಭಿಮಾನಿಗಳ ಸಲಹೆ ಸಹಕಾರದೊಂದಿಗೆ ಸುಮಾರು 65 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೊದ್ದಾರದ ಕೆಲಸಗಳು ನಡೆದಿದ್ದು, ಫೆ.25 ರಂದು  11.20 ಕ್ಕೆ ಕುಡುಪು ಶ್ರೀ ವೇ.ಮೂ. ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಕಶಾಭಿಷೇಕ ನಡೆಯಲಿದೆ ಎಂದರು.


 ಫೆ. 22 ರಿಂದ 25 ವರೆಗೆ  ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅನ್ನಸಂತರ್ಪಣೆ ನಡೆಯಲಿದೆ. ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಗೆ ಅನುಕುಲವಾಗುವಂತೆ ಫೆ.25 ರಂದು ಸುಂಕದಕಟ್ಟೆ ಯಿಂದ ಕ್ಷೇತ್ರದ ವರೆಗೆ ವಿಶೇಷ ವಾಹನ ಸೌಲಭ್ಯ ಕಲ್ಪಿಸಲಾಗುವುದು ಎಂದರು.


  ಈ ಸಂದರ್ಭ ಕ್ಷೇತ್ರದ ಪ್ರಧಾನ ಅರ್ಚಕ ಜಯರಾಮ ಅಸ್ರಣ್ಣ, ಪ್ರ.ಕಾರ್ಯದರ್ಶಿ ಮುರಳೀದರ ಶೆಟ್ಟಿ, ಕೋಶಾಧಿಕಾರಿ ಸುಖೇಶ್ ಮನೈ, ಮುರಳಿಧರ ಭಟ್, ಶೈಲೇಶ್ ಚೌಟ, ವಸಂತ್ ಕೆ. ಕಜೆ ಪದವು ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News