ಪಾಕಿಸ್ತಾನಿ ಶಾಲೆಗಳಲ್ಲಿ ಉರ್ದುಭಾಷೆ ರಾಜಕೀಯ ಒತ್ತಡದ ಪರಿಸ್ಥಿತಿ ನಿರ್ಮಿಸಿದೆ: ಯುನೆಸ್ಕೊ.

Update: 2016-02-22 09:27 GMT

ಇಸ್ಲಾಮಾಬಾದ್: ಭಾಷೆ ಎರಡು ಅಲಗಿನ ಕತ್ತಿ ಆಗಿದೆ. ಈ ವಿವಿಧ ಜನವಿಭಾಗಗಳು ಬದುಕುತ್ತಿರುವ ಪಾಕಿಸ್ತಾನದ ಶಾಲೆಗಳಲ್ಲಿ ಉರ್ದು ಬಳಕೆ ರಾಜಕೀಯ ಒತ್ತಡವನ್ನು ಸೃಷ್ಟಿಸಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಅವರು ತಿಳಿಯುವ ಭಾಷೆಯಲ್ಲಿ ಶಿಕ್ಷಣ ನೀಡಬೇಕೆಂದು ಯುನೆಸ್ಕೋ ಶಿಫಾರಸು ಮಾಡಿದೆ.

ಮಾತೃಭಾಷಾ ದಿವಸ ಸಂದರ್ಭದಲ್ಲಿ ಯುನೆಸ್ಕೊ ಒಂದು ನೀತಿ ಪತ್ರವನ್ನು ಜಾರಿಗೊಳಿಸಿದ್ದು ಟರ್ಕಿ, ನೇಪಾಲ,ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಗ್ವಾಟೆಮಾಲದಲ್ಲಿ ವಿವಿಧ ಜಾತಿಯ ಸಮಾಜವನ್ನು ಉದಾಹರಿಸಿ ಮಕ್ಕಳಿಗೆ ಅರ್ಥವಾಗುವ ಭಾಷೆಯಲ್ಲಿ ಶಿಕ್ಷಣ ನೀಡಬೇಕೆಂದು ಪಾಕಿಸ್ತಾನಕ್ಕೆ ಅದು ತಿಳಿಹೇಳಿದೆ. ಯುನೆಸ್ಕೊ ಶುಕ್ರವಾರ ಪ್ರಕಟಿಸಿದ ವರದಿಯಲ್ಲಿ ಪಾಕಿಸ್ತಾನಿ ಸರಕಾರಿ ಶಾಲೆಗಳಲ್ಲಿ ಉರ್ದುಭಾಪೆಗೆ ಒತ್ತು ನೀಡುವುದರಿಂದ ಶಾಲೆಗಳಲ್ಲಿ ರಾಜಕೀಯ ಒತ್ತಡ ಸೃಷ್ಟಿಯಾಗಿದೆ ಎಂದು ಅದು ಹೇಳಿದೆ.

ಪಾಕಿಸ್ತಾನದಲ್ಲಿ ಶೇ. 8ಕ್ಕಿಂತಲೂ ಕಡಿಮೆ ಮಂದಿ ಉರ್ದುಭಾಷೆ ಮಾತಾಡುತ್ತಾರೆ. ಯುನೆಸ್ಕೊ ಸ್ವಾತಂತ್ರ್ಯದ ಬಳಿಕ ಪಾಕಿಸ್ತಾನದಲ್ಲಿ ಉರ್ದುವನ್ನು ರಾಷ್ಟ್ರ ಭಾಷೆಯಾಗಿ ಹೆಸರಿಸಿ ಶಾಲೆಗಳಿಗೆ ಭಾಷಾ ಸೂಚಿ ಜಾರಿಗೊಳಿಸಲಾಗಿತ್ತು. ಪಾಕಿಸ್ತಾನದಲ್ಲಿ ಆರು ಇತರ ದೊಡ್ಡ ಭಾಷೆಗಳು ಹಾಗೂ 58ಸಣ್ಣ ಬಾಷೆಗಳ ಸಮೂಹವಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News