ಮೂಡುಬಿದಿರೆ: ಉಪ ನೋಂದಾಣಾಧಿಕಾರಿ ನಾಪತ್ತೆ
Update: 2016-02-22 15:20 IST
ಮೂಡುಬಿದಿರೆ: ಮೂರು ದಿನಗಳಿಂದ ಕಾರ್ಯ ನಿರ್ವಹಿಸದ ಸರಕಾರಿ ಕಚೇರಿ, ಸರ್ವರ್ ಡೌನ್ ಎಂಬ ನೆಪ ಹೇಳುತ್ತಿರುವ ಕಚೇರಿ ಸಿಬ್ಬಂದಿ ಪರಿಣಾಮ ಕಚೇರಿಯಲ್ಲಿ ಅವ್ಯವಸ್ಥೆಯಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ.
ಕಚೇರಿಗೆ ಬೀಗ ಹಾಕಿರುವುದರಿಂದ ಕಳೆದ ಮೂರು ದಿನಗಳಿಂದ ಸ್ಥಳೀಯರು ಕಚೇರಿಗೆ ಬಂದು ಯಾವುದೇ ಕೆಲಸವಾಗದೆ ವಾಪಸ್ ಹೋಗುತ್ತಿದ್ದಾರೆ. ಇದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.