×
Ad

ಕಾಸರಗೋಡು : ದೋಣಿ ಯಿಂದ ಹೊಳೆಗೆ ಬಿದ್ದು ಕಾರ್ಮಿಕ ಮೃತ್ಯು

Update: 2016-02-22 15:39 IST

ಕಾಸರಗೋಡು :  ದೋಣಿ ಯಿಂದ  ಹೊಳೆಗೆ ಬಿದ್ದು  ಉತ್ತರ ಪ್ರದೇಶ ಮೂಲದ  ಕಾರ್ಮಿಕನೋರ್ವ ಮೃತಪಟ್ಟ ಘಟನೆ  ನಡೆದಿದೆ.ಮೃತಪಟ್ಟ ವರನ್ನು  ಧರಂ ಪಾಲ್ ( 45) ಎಂದು ಗುರುತಿಸಲಾಗಿದೆ.  ಕಾಂಕ್ರೀಟ್ ಕೆಲಸ ನಿರ್ವಹಿಸುತ್ತಿದ್ದ ಇವರು  ಆದಿತ್ಯವಾರ ಸಂಜೆ ಕೆಲಸ ಮುಗಿಸಿ ಉಳಿದ ಎಂಟು ಮಂದಿ ಜೊತೆ  ದೋಣಿ ಯಲ್ಲಿ  ಮರಳುತ್ತಿದ್ದಾಗ ತುರ್ತಿ ಹೊಳೆಯಲ್ಲಿ  ಹೊಳಗೆ ಎಸೆಯಲ್ಪಟ್ಟಿದ್ದು, ಅಗ್ನಿಶಾಮಕ ದಳ ಮತ್ತು ಪೊಲೀಸರು  ತಡರಾತ್ರಿ ತನಕ ಶೋಧ ನಡೆಸಿದ್ದರು . ಆದರೆ ಮ್ರತದೇಹ ಪತ್ತೆಯಾಗಲಿಲ್ಲ . ಈ ನಡುವೆ  ಇಂದು ಬೆಳಿಗ್ಗಿನಿಂದ ಶೋಧ ಕಾರ್ಯ ಆರಂಭಿಸಿದ್ದು , ಮಧ್ಯಾಹ್ನದ ವೇಳೆಗೆ ಮ್ರತದೇಹ ಪತ್ತೆಯಾಗಿದೆ. ಮ್ರತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರ ದಲ್ಲಿರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News