×
Ad

ಪುತ್ತೂರು: ಡಾ. ವರ್ಮುಡಿಗೆ ಇಂಗ್ಲಂಡಿನ ಗೌರವ ಪ್ರಾಧ್ಯಾಪಕ ಕೊಡುಗೆ

Update: 2016-02-22 17:21 IST

ಪುತ್ತೂರು: ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ವಿಘ್ನೇಶ್ವರ ವರ್ಮುಡಿ ಅವರಿಗೆ ಇಂಗ್ಲಂಡ್‌ನ ಕ್ಯಾಂಬ್ರಿಜ್‌ನಲ್ಲಿರುವ ಇಂಟರ್‌ನ್ಯಾಷನಲ್ ಬಯೋಗ್ರಾಫಿಕಲ್ ಸೆಂಟರ್ ಹಾನರರಿ ‘ಪ್ರೊಫೆಸರ್ ಆಫ್ ಎಜುಕೇಶನ್’ ಕೊಡುಗೆ ನೀಡಿ ಗೌರವಿಸಿದೆ. ಶಿಕ್ಷಣ ಕ್ಷೇತ್ರದಲ್ಲಿನ ಅತ್ಯುನ್ನತ ಸಾಧನೆ ಮತ್ತು ಕೃಷಿಉತ್ಪನ್ನ ಮಾರುಕಟ್ಟೆ ಅಲ್ಲದೆ ಗ್ರಾಮೀಣಾಭಿವೃದ್ಧಿ ವಿಚಾರಗಳಿಗೆ ಸಂಬಂಧಿಸಿದಂತೆ ತಜ್ಞತೆಯನ್ನು ಗೌರವಿಸಿ ಈ ಕೊಡುಗೆ ನೀಡಲಾಗಿದೆ. ಈ ಸಂಸ್ಥೆ ಆರಂಭಗೊಂಡು 50 ವರ್ಷಗಳಾಗಿರುವ ಸಂದರ್ಭದಲ್ಲಿ ವಿಶ್ವದ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದವರಿಗೆ ಈ ಗೌರವ ಕೊಡುಗೆ ನೀಡಲಾಗುತ್ತಿದೆ. ಡಾ. ವರ್ಮುಡಿ ಅವರು 1982ರಿಂದ ಕೃಷಿ ಮತ್ತು ಅಂತರಾಷ್ಟ್ರೀಯ ಆರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಸಾವಿರಕ್ಕೂ ಅಧಿಕ ಸಂಶೋಧನಾ ಲೇಖನಗಳು ಹಾಗೂ 40ಕ್ಕೂ ಅಧಿಕ ಪುಸ್ತಕಗಳನ್ನು ರಚಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News