×
Ad

ಸುಳ್ಯ: ಕರ್ಲಪ್ಪಾಡಿ ಬ್ರಹ್ಮಕಲಶ ಮೆರವಣಿಗೆ

Update: 2016-02-22 17:35 IST

ಸುಳ್ಯ: ಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಶ್ರೀಗಣಪತಿ ಪ್ರತಿಷ್ಠೆ ಆರಂಭಗೊಂಡಿದ್ದು, 25ರವರೆಗೆ ನಡೆಯಲಿದೆ. ಇದರ ಪ್ರಯುಕ್ತ ಸುಳ್ಯ ಜ್ಯೋತಿ ವೃತ್ತದಿಂದ ಶ್ರೀಶಾಸ್ತಾವೇಶ್ವರ ದೇವಸ್ಥಾನದವರೆಗೆ ಗಣಪತಿ ವಿಗ್ರಹದ ಮೆರವಣಿಗೆ, ಸ್ವಾಗತ ಕಾರ್ಯಕ್ರಮ ನಡೆಯಿತು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಧನಂಜಯ ಅಡ್ಪಂಗಾಯ, ದೇವಳದ ಆಡಳಿತ ಮೊಕ್ತೇಸರ ಮುದ್ದಪ್ಪ ಗೌಡ ಕರ್ಪ್ಪಾಡಿ, ಅರ್ಚಕ ರಾದ ಸುಬ್ರಹ್ಮಣ್ಯ ನೆಲ್ಲಿತ್ತಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕರುಣಾಕರ ಅಡ್ಪಂಗಾಯ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸುಕುಮಾರ ಕೋಡ್ತುಗುಳಿ, ಕೋಶಾಧಿಕಾರಿ ಜಗನ್ನಾಥ ರೈ ಪಡ್ಡೈಬನ, ರೂಪಾನಂದ ಕರ್ಪ್ಪಾಡಿ, ಬಾಲಕೃಷ್ಣ ಪಡ್ಡಂಬೈಲು, ಜಿಲ್ಲಾ ಪಂಚಾಯತ್ ಸದಸ್ಯ ನವೀನ್ ಕುಮಾರ್ ಮೇನಾಲ, ಸೇವಾ ಸಮಿತಿ ಅಧ್ಯಕ್ಷ ರಾಜೇಶ್ ಮೇನಾಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News