×
Ad

ಉಳ್ಳಾಲ : ಕೇಬಲ್ ಆಪರೇಟರ್‌ಗೆ ವಿದ್ಯುತ್ ಸ್ಪರ್ಶ; ಪ್ರಾಣಾಪಾಯದಿಂದ ಪಾರು

Update: 2016-02-22 17:54 IST

ಉಳ್ಳಾಲ. ಫೆ, 22: ಹೈಟೆನ್ಶನ್ ವಿದ್ಯುತ್ ಟ್ರಾನ್ಸ್‌ಫಾರ್ಮ್ ಕಂಬದಲ್ಲಿ ಕೇಬಲ್ ಜೋಡಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಎಸೆಯಲ್ಪಟ್ಟ ಯುವಕ ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಘಟನೆ ಉಳ್ಳಾಲ ಠಾಣ ವ್ಯಾಪ್ತಿಯ ತೊಕ್ಕೋಟುವಿನಲ್ಲಿ ನಡೆದಿದೆ.
ತೊಕ್ಕೊಟ್ಟು ಲಚ್ಚಿಲ್ ನಿವಾಸಿ ನಿಶಾಂತ್ (29) ಎಂಬವನೇ ವಿದ್ಯುತ್ ಸ್ಪರ್ಶಕ್ಕೊಳಗಾದವನು. ನಿಶಾಂತ್ ಸ್ಥಳೀಯ ಕೇಬಲ್ ಆಪರೇಟರ್ ಬಳಿ ಸಹಾಯಕ ನೌಕರನಾಗಿದ್ದು ಸೋಮವಾರ ಬೆಳಿಗ್ಗೆ ಕೇಬಲ್ ದುರಸ್ಥಿ ಕೆಲಸ ನಡೆಸುತ್ತಿದ್ದ ವೇಳೆ ತೊಕ್ಕೋಟು ಓವರ್‌ಬ್ರಿಡ್ಜ್‌ನಲ್ಲಿರುವ ಗೂಡಂಗಡಿ ಒಂದರ ಮೇಲೆ ಹತ್ತಿ ವಿದ್ಯುತ್ ಟ್ರಾನ್ಸ್‌ಫಾರ್ಮ್ ಕಂಬಕ್ಕೆ ಏರಿ ಕೇಬಲ್ ಜೋಡಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಕೆಳಗಿದ್ದ ಕಬ್ಬಿಣದ ಗೂಡಂಗಡಿಯ ಮೇಲೆ ಎಸೆಯಲ್ಪಟ್ಟ ಪರಿಣಾಮ ತಲೆಗೆ ಗಂಭೀರ ಗಾಯವಾಗಿದೆ.ಕೂಡಲೇ ಸ್ಥಳಿಯರು ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಸಾಗಿಸಿದ್ದಾರೆ.ಇದೀಗ ಗಂಭಿರ ಗಾಯಗೊಂಡ ನಿಶಾಂತ್ ಪ್ರಾಣಾಪಾಯದಿಂದ ಪಾರಾಗಿದ್ದು ಚೇತರಿಸಿ ಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News