ಬೆಳ್ತಂಗಡಿ; ವಾರ್ಷಿಕ ಯುವ ಕ್ರೀಡೋತ್ಸವ
ಬೆಳ್ತಂಗಡಿ; ಕಪುಚಿನ್ ಕೃಷಿಕ್ ಸೇವಾ ಕೇಂದ್ರ ವಿಮುಕ್ತಿ ಇದರ ವತಿಯಿಂದ ಚೈಲ್ಡ್ ಂಡ್‌ನ ಸಹಯೋಗದಲ್ಲಿ ವಾರ್ಷಿಕ ಯುವ ಕ್ರೀಡೋತ್ಸವನ್ನು ಅನುಗ್ರಹ ಶಾಲಾ ಮೈದಾನದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ಪ್ರಭಾಕರ್ ಮಾತನಾಡಿ ಕ್ರೀಡೆಯು ದೈಹಿಕ ಹಾಗು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ, ಯುವಕರ ಜೀವನದಲ್ಲಿ ಕ್ರೀಡೆಯು ಬಹು ಮುಖ್ಯವಾಗಿದೆ, ಸಂಸ್ಥೆಯು ಕೇವಲ ಶಿಕ್ಷಣಕ್ಕೆ ಒತ್ತು ಕೊಡದೇ ಈ ರೀತಿಯ ಕ್ರೀಡಾ ಚಟುವಟಿಕೆಯನ್ನು ನಡೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಸಂಸ್ಥೆಯ ನಿರ್ದೆಶಕರಾದ ವಂ. ವಿನೋದ್ ಮಾಸ್ಕರೆನ್ಹಸ್ ಮಾತನಾಡಿ ಸಿಕ್ಕ ಅವಕಾಶವನ್ನು ಉಪಯೋಗಿಸಿ ಎಲ್ಲಾ ಚಟುವಟಿಕೆಯಲ್ಲಿ ಉತ್ತಮವಾಗಿ ಭಾಗವಹಿಸಬೇಕೆಂಬುದನ್ನು ತಿಳಿಸಿ ಯುವಕೂಟದ ಸದಸ್ಯರಿಗೆ ಶುಭ ಹಾರೈಸಿದ್ದರು. ಸಂಸ್ಥೆಯ ನಿರ್ದೆಶಕಾರದ ವಂ.ಾ.ಅಮರ್ ಲೋಬೋ ರವರು ಹಾಗು ವಿಮುಕ್ತಿ ಒಕ್ಕೂಟದ ಅಧ್ಯಕ್ಷೆ ವಿಮಲ ಉಪಸ್ಥಿತರಿದ್ದರು. ಯುವ ಕೂಟದ ಸದಸ್ಯರಿಗೆ ವರದಿ ಪುಸ್ತಕ ,ಟಿ-ಶರ್ಟ್, ಕ್ಯಾಪ್, ಗುರುತು ಚೀಟಿಗಳನ್ನು ವಿತರಸಲಾಯಿತು. ಸಮಾರೋಪ ಕಾರ್ಯಕ್ರಮದಲ್ಲಿ ಸೈಂಟ್ ಅಂಟೋನಿ ಚರ್ಚ್ ಉಜಿರೆಯ ಧರ್ಮ ಗುರುಗಳಾದ ವಂ.ಾ.ಜೋಸೆಪ್ ಮಾಸ್ಕರೆನ್ಹಸ್, ಕಪುಚಿನ್ ಕೃಷಿಕ್ ಸೇವಾ ಕೇಂದ್ರ ವಿಮುಕ್ತಿ ಇದರ ಕಾರ್ಯದರ್ಶಿಯಾದ ವಂ.ಾ.ನವೀನ್ ಡಿಸೋಜಾಹಾಗೂ ವಿಮುಕ್ತಿ ಬಣಕಲ್ ಸಂಸ್ಥೆಯ ನಿರ್ದೆಶಕಾರದ ವಂ.ಾ.ವಿನ್ಸಿ ಡಿ ಸೋಜ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕ್ರೀಡಾ ವಿಜೀತರಿಗೆ ಬಹುಮಾನವನ್ನು ನೀಡಿದ್ದರು. ವಿಮುಕ್ತಿ ಮಕ್ಕಳ ಕೂಟದ ಸಂಯೋಜಕರಾದ ಸುನೀಲ್ ಕುಮಾರ್ ರವರು ಕಾರ್ಯಕ್ರಮದ ನಿರೂಪನೆಯನ್ನು ನಡೆಸಿದ್ದರು, ವಿವೇಕಾನಂದ ಯುವ ಕೂಟದ ಸದಸ್ಯೆಯಾದ ಕು.ದಿವ್ಯಶ್ರೀ ಸ್ವಾಗತಿಸಿದರು. ವಿಮುಕ್ತಿ ಯುವಕೂಟದ ಸಂಯೋಜಕಿ ಕು.ಅಕ್ಷಿತ ಹಾಗು ವಿಮುಕ್ತಿ ಒಕ್ಕೂಟದ ಮೇಲ್ವಿಚಾರಕರಾದ ಪ್ರಾನಿಸ್ಸ್ ಕಾರ್ಯಕ್ರಮ ನಿರೂಪಿಸಿದರು.