ಮಂಗಳೂರು : ರೈಲ್ವೆ ಲೆವೆಲ್ ಕ್ರಾಸಿಂಗ್ ಸಮಸ್ಯೆ ಬಗ್ಗೆ ಅಧಿಕಾರಗಳ ಜೊತೆ ಸ್ಥಳೀಯ ನಿವಾಸಿಗಳೊಂದಿಗೆ ಚರ್ಚೆ
ಮಂಗಳೂರು,ಫೆ.22:ಮಹಾಕಾಳಿಪಡ್ಪು ರೈಲ್ವೆ ಲೆವೆಲ್ ಕ್ರಾಸಿಂಗ್ ಸಮಸ್ಯೆ ಬಗ್ಗೆ ರೈಲ್ವೆ ಮತ್ತು ನಗರ ಪಾಲಿಕೆ ಅಧಿಕಾರಗಳ ಜೊತೆ ಸ್ಥಳೀಯ ನಿವಾಸಿಗಳೊಂದಿಗೆ ಚರ್ಚಿಸಿದ ಬಳಿಕ ಮಹಾಕಾಳಿ ಪಡ್ಪು ಲೆವೆಲ್ ಕ್ರಾಸಿಂಗ್ ಕೊಜಪಾಡಿ ಅಂಡರ್- ಕ್ರಾಸ್ ಮಧ್ಯೆ ಅಂಡರ್-ಬ್ರಿಜ್ ರಚಿಸಲು ಅಂದಾಜು ಪಟ್ಟಿ ತಯಾರಿಸಲು ಅಧಿಕಾರಿಗಳಿಗೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಸೂಚನೆ ನೀಡಿದ್ದಾರೆ.
ಅನೇಕ ವರ್ಷಗಳಿಂದ ಮಹಾಕಾಳಿಪಡ್ಪು ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಟ್ರಾಫಿಕ್ ಜಾಮ್ ಆಗಿ ಅನೇಕ ತುರ್ತು ಸಂದರ್ಭಗಳಲ್ಲಿ ಜನರಿಗೆ ಆಸ್ಪತ್ರೆಗೆ ದಾಖಲು ಸಂಧರ್ಭದಲ್ಲಿ , ವಿದ್ಯಾರ್ಥಿಗಳ ಪರಿಕ್ಷೆಯ ಸಂದರ್ಭಗಳಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ದಿನಂಪ್ರತಿ ಪರಿಸರದ ಜನರು ತೊಂದರೆಯನ್ನು ಅನುಭಸುತ್ತಿದ್ದಾರೆ. ಇದರ ಬಗ್ಗೆ ಸ್ಥಳೀಯರ ದೂರಿನನ್ವಯ ರೈಲ್ವೆ ಮತ್ತು ನಗರ ಪಾಲಿಕೆ ಅಧಿಕಾರಿಗಳೊಂದಿಗೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾರವರು ಸ್ಥಳಕ್ಕೆ ಭೇಟಿ ನೀಡಿ ಟ್ರಾಫಿಕ್ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಂದ ಸರಿಯಾದ ಮಾಹಿತಿಯನ್ನು ಪಡೆದು ಸ್ಥಳೀಯ ನಿವಾಸಿಗಳ ರೈಲ್ವೆ ಅಧಿಕಾರಿಗಳ ನಗರ ಪಾಲಿಕೆ ಅಧಿಕಾರಿಗಳ ಜೊತೆ ಚರ್ಚಿಸಿ ಒಂದು ಕಾರ್ಯಪಡೆ ರಚಿಸಲು ತೀರ್ಮಾನಿಸಲಾಯಿತು .ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಮಹಾಕಾಳಿ ಪಡ್ಪು ಕೊಜಪಾಡಿ ಅಂಡರ್ ಕ್ರಾಸ್ ಮಧ್ಯೆ 4.30 ಮೀಟರ್‌ನ ಅಂಡರ್-ಪಾಸ್ ನ್ನು ಸುಮಾರು ರೂ. 2.5ಕೋಟಿ ವೆಚ್ಚದ ಅಂದಾಜು ಪಟ್ಟಿಯನ್ನು ತಯಾರಿಸಿ ಅದನ್ನು ಮುಂದಿನ ಸದರ್ನ್ ರೈಲ್ವೆ ಸಭೆಯಲ್ಲಿ ಮಂಡಿಸುವುದಾಗಿ ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಸದರ್ನ್ ರೈಲ್ವೆ ವಿಭಾಗ ಅಧಿಕಾರಿಗಳಾದ ಭೂಪತಿ, ಜಿಲೇನ್ ಮಹಾನಗರ ಪಾಲಿಕೆ ಇಂಜಿನಿಯರ್ ಗಳಾದ ನಿಂಗೇಗೌಡ, ಗಣಪತಿ ಯಶವಂತ್ ಮತ್ತು ಸ್ಥಳೀಯರಾದ ರಾಜ್‌ಗೋಪಾಲ್, ರಜಾಕ್, ಮಾಜಿ ನಗರಪಾಲಿಕೆ ಸದಸ್ಯಭಾಸ್ಕರ್, ದೇವದಾಸ್ ಶೆಟ್ಟಿ, ಅಬ್ದುಲ್ ಸಮಾದ್, ಇಮ್ತಿಯಾಜ್, ಶರೀಫ್, ಮು ನವಾಜ್,ವಿದ್ಯಾ, ಎಲಿಜಬೆತ್ ಉಪಸ್ಥಿತರಿದ್ದರು.