ಮಂಗಳೂರು : ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರ ದಿನದ 24 ಗಂಟೆಯೂ ಸಹಾಯವಾಣಿ ಕೇಂದ್ರ ಕರ್ತವ್ಯ ನಿರ್ವಹಣೆ
Update: 2016-02-22 19:33 IST
ಮಂಗಳೂರು,ಫೆ.22:ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರವು ದ.ಕ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು. ದಿನದ 24 ಗಂಟೆಯೂ ಸಹಾಯವಾಣಿ ಕೇಂದ್ರ ಕರ್ತವ್ಯ ನಿರ್ವಹಿಸುತ್ತದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಎಸ್.ಡಿ. ಶರಣಪ್ಪ ಅವರು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ ಜನವರಿ ತಿಂಗಳ ಚಟುವಟಿಕೆಗಳನ್ನು ಪರಿಶೀಲಿಸಿದ್ದು, ಈ ವರೆಗೆ 6234 ರಿಯ ನಾಗರೀಕರ ಸಮಸ್ಯೆಗಳಿಗೆ ಕ್ಲಪ್ತ ಸಮಯಗಳಲ್ಲಿ ಸ್ಪಂದಿಸಲಾಗಿದೆ. ಅಲ್ಲದೇ, ವಿವಿಧ ಇಲಾಖೆಗಳಿಗೆ ಖುದ್ದಾಗಿ ಭೇಟಿ ನೀಡಿ ಹಿರಿಯ ನಾಗರೀಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಹಾಯವಾಣಿ ಕೇಂದ್ರವು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತದೆ. ಕೇಂದ್ರದ ಸಂಯೋಜಕರಾಗಿ ಎಡ್ವಿನ್ ಲೋಬೋ ಕಾರ್ಯನಿರ್ವಹಿಸುತ್ತಿದ್ದಾರೆ. ಹಿರಿಯ ನಾಗರೀಕರು ಯಾವುದೇ ಸಮಸ್ಯೆಗಳಿದ್ದಲ್ಲಿ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ 1090 ಅಥವಾ ಜಿಲ್ಲಾ ಪೊಲೀಸ್ ನಿಸ್ತಂತು ವಿಭಾಗ 0824-2220500, 2440284 ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.