×
Ad

ಹೊರ ರಾಜ್ಯಗಳಲ್ಲಿ ವಾಹನ ನೋಂದಣಿ: ತೆರಿಗೆ ಪಾವತಿಸಲು ಸೂಚನೆ

Update: 2016-02-22 19:34 IST

ಮಂಗಳೂರು.ಫೆ.22:ಹೊರ ರಾಜ್ಯಗಳಲ್ಲಿ ವಾಹನಗಳನ್ನು ನೊಂದಾಯಿಸಿಕೊಂಡು ಕರ್ನಾಟಕದ ಜೀವಾವಧಿ ತೆರಿಗೆ ಸಂದಾಯಿಸದೆ ಮಂಗಳೂರಿನಲ್ಲಿ ಓಡಾಡುತ್ತಿರುವ ಬಗ್ಗೆ ದೂರುಗಳು ಸಾರ್ವಜನಿಕರಿಂದ ಬಂದಿರುತ್ತದೆ. ಅಂತಹ ವಾಹನದ ಮಾಲೀಕರು ಮಂಗಳೂರು ಆರ್‌ಟಿಓ ಕಚೇರಿಯಲ್ಲಿ ಸ್ವಯಂ ಪ್ರೇರಿತವಾಗಿ ಜೀವಾವಧಿ ತೆರಿಗೆ ಪಾವತಿಸಲು ಆದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಇಲಾಖೆಯ ಮೋಟಾರು ವಾಹನ ನಿರೀಕ್ಷಕರ ತಂಡದಿಂದ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು.

ತಪಾಸನೆ ವೇಳೆಯಲ್ಲಿ ತೆರಿಗೆ ಸಂದಾಯಿಸದೆ ವಾಹನ ಓಡಾಡುತ್ತಿರುವುದು ಕಂಡು ಬಂದಲ್ಲಿ ವಾಹನವನ್ನು ವಶಪಡಿಸಿಕೊಳ್ಳಲಾಗುವುದು. ನಗರದಲ್ಲಿ ಹಲವು ವಾಹನಗಳು ಪಾಂಡಿಚೇರಿಯಲ್ಲಿ ನೊಂದಾಯಿಸಿಕೊಂಡು ಸಂಚರಿಸುತ್ತಿರುವ ಬಗ್ಗೆ ಅನೇಕ ದೂರುಗಳು ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಮಂಗಳೂರು ಉಪ ಸಾರಿಗೆ ಆಯುಕ್ತ ಜಿ.ಎಸ್. ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News