ಸಿಯಾಚಿನ್‌ನಲ್ಲಿ ಬದುಕು: ಆಳ್ವಾಸ್‌ನಲ್ಲಿ ಉಪನ್ಯಾಸ
ಮೂಡುಬಿದಿರೆ: ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ರೋಸ್ಟ್ರುಮ್ ಸ್ಪೀಕರ್ಸ್ ಕ್ಲಬ್ ವತಿಯಿಂದ ಸೋಮವಾರ ‘ಸಿಯಚಿನ್‌ನಲ್ಲಿ ಬದುಕು’ ಕುರಿತು ಉಪನ್ಯಾಸ ನಡೆಯಿತು. ಬ್ರಿಗೇಡಿಯರ್ ಐ.ಎನ್.ರೈ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಬುಲೆಟ್ ಪ್ರೂಫ್‌ನಂತಹ ಅಧುನಿಕ ತಂತ್ರಜ್ಞಾನಗಳತ್ತ ತೆರೆದುಕೊಳ್ಳುತ್ತಿರುವ ದೇಶದಲ್ಲಿ ಸೈನಿಕರಿಗೆ ಬುಲೆಟ್ ಜಾಕೆಟ್‌ನಂತಹ ವ್ಯವಸ್ಥೆಯನ್ನು ಕಲ್ಪಿಸಬೇಕು. ರಕ್ಷಣಾ ಪರಿಕರಗಳನ್ನು ತಯಾರಿಸುವಲ್ಲಿ ಇತರ ದೇಶಗಳನ್ನು ಹೆಚ್ಚು ಅವಲಂಬಿಸದೆ, ನಮ್ಮಲ್ಲಿ ಯುದ್ಧ ಪರಿಕರಗಳನ್ನು ತಯಾರು ಮಾಡುವಂತಾಗಬೇಕು ಎಂದರು.
ಸಿಯಾಚಿನ್‌ನಲ್ಲಿ ದೇಶಕ್ಕೆ ಸೇವೆ ಸಲ್ಲಿಸುತ್ತಿರುವ ಯೋಧರ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಸೈನಿಕರಿಗೆ ಉಸಿರಾಡುಲು ಕಷ್ಟವಾಗುವಂತಹ ಪರಿಸ್ಥಿತಿಯಿದೆ. ನೈಜ್ಯ ದೇಶಭಕ್ತಿಗೆ ಸೈನಿಕರಿಗೆ ಬೆಂಬಲ ನೀಡಬೇಕೆಂದರು. ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಉಪನ್ಯಾಸಕ ರವೀಂದ್ರ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.