×
Ad

ಮಂಗಳೂರು : ಮಾ.3: ಬಾಯಾರ್ ತಂಙಳ್ ಬೆಂಗರೆಗೆ

Update: 2016-02-22 20:08 IST

ಮಂಗಳೂರು,ಫೆ.22: ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಬೆಂಗರೆ ಶಾಖೆಯ 20 ನೇ ವರ್ಷಾಚರಣೆಯ ಅಂಗವಾಗಿ 5 ದಿವಸಗಳ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಫೆ.28ರಿಂದ ಮಾ.3 ರವರೆಗೆ 5 ರಾತ್ರಿಗಳಲ್ಲಿ ಬೆಂಗರೆ ಸೂಪರ್‌ಸ್ಟಾರ್ ಮೈದಾನದ ಬಳಿ ವಿಜೃಂಭಣೆಯಿಂದ ಜರುಗಲಿರುವುದು. ಮಾ.3 ರಂದು ಸೌಹಾರ್ದ ಸಂಗಮ ಹಾಗೂ ದುವಾ ಮಜ್ಲಿಸ್ ಜರುಗಲಿದ್ದು, ಮುಖ್ಯ ಅತಿಥಿಗಳಾಗಿ ಬಹು. ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಛಿಕೋಯ ತಂಙಳ್ , ಬಾಯಾರ್ ನೇತೃತ್ವವನ್ನು ನೀಡಲಿದ್ದಾರೆ.

 5 ದಿವಸಗಳ ವಿವಿಧ ಕಾರ್ಯಕ್ರಮದಲ್ಲಿ ಬುರ್ದಾ ಮಜ್ಲಿಸ್ , ಕಥಾಪ್ರಸಂಗ,ದಫ್ ಪ್ರದರ್ಶನ, ಮತ ಪ್ರಭಾಷಣ ಸಹಿತ 20 ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, 20 ವಿಧವೆಯರಿಗೆ ನಮಾಝ್ ಕಿಟ್, 20 ಅನಾಥ ಮಕ್ಕಳಿಗೆ ಸ್ಕೂಲ್ ಬ್ಯಾಗ್, 20 ಬಡಮಕ್ಕಳಿಗೆ ಮುಂಜಿ ಹಾಗೂ ವೆನ್ಲಾಕ್ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು www.islamicmediamission.com ನಲ್ಲಿ ನೇರಪ್ರಸಾರದಲ್ಲಿ ನೋಡಬಹುದಾಗಿದೆ ಎಂದು ಬಿ.ಎ.ಹಮೀದ್ ಬೆಂಗ್ರೆ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News