ವಿಟ್ಲ : ಪಲ್ಲಮಜಲು ಮಸೀದಿ ಅಧ್ಯಕ್ಷರಾಗಿ ಕೆ.ಎಸ್. ಅಬೂಬಕ್ಕರ್ ಆಯ್ಕೆ
Update: 2016-02-22 20:42 IST
ವಿಟ್ಲ : ಬಿ.ಸಿ.ರೋಡು ಸಮೀಪದ ಪಲ್ಲಮಜಲು ಹಯಾತುಲ್ ಇಸ್ಲಾಂ ಜುಮಾ ಮಸೀದಿ ಇದರ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು ಅವರು ಪುನರಾಯ್ಕೆಯಾಗಿದ್ದಾರೆ. ಇತ್ತೀಚೆಗೆ ಮಸೀದಿ ಸಭಾಂಗಣಲ್ಲಿ ನಡೆದ ಸಮಿತಿ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ. ಗೌರವಾಧ್ಯಕ್ಷರಾಗಿ ಹಾಜಿ ಸಿ.ಕೆ. ಸೂಫಿ ಮುಸ್ಲಿಯಾರ್, ಉಪಾಧ್ಯಕ್ಷರಾಗಿ ಪಿ.ಎಂ. ಇಸಾಕ್, ಪ್ರಧಾನ ಕಾರ್ಯದರ್ಶಿಯಾಗಿ ಜಿ.ಎಸ್. ಶರೀಫ್, ಜೊತೆ ಕಾರ್ಯದರ್ಶಿಗಳಾಗಿ ಪಿ.ಸಿ. ಮುಹಮ್ಮದ್ ಹಾಗೂ ಎ.ಎಚ್. ಅಬ್ದುಲ್ ರಹಿಮಾನ್, ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಉಷಾ ಅವರನ್ನು ಆರಿಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಮುಹಮ್ಮದ್, ಅದ್ದಾಕ, ಶೇಖಬ್ಬ, ಇಸ್ಮಾಯಿಲ್ ಕೊಳಂಬೆ, ಪಿ.ಎ. ಹುಸೈನ್, ಅಬ್ದುಲ್ ಜಬ್ಬಾರ್, ಸಾದಿಕ್ ಶಿಕಾರಿಪುರ, ಪಿ.ಎಂ. ಆದಂ, ಹಾಜಿ ಶಾಹುಲ್ ಹಮೀದ್ ಇವರನ್ನ ನೇಮಕ ಮಾಡಲಾಯಿತು.