ಉಳ್ಳಾಲ: ಅನ್ಯಾಯ ಮಾಡಲು ಇಸ್ಲಾಂನಲ್ಲಿ ಅವಕಾಶವಿಲ್ಲ
ಉಳ್ಳಾಲ: ಅನ್ಯಾಯ ಮಾಡಲು ಇಸ್ಲಾಂನಲ್ಲಿ ಅವಕಾಶವಿಲ್ಲವಾದರೂ ಇಂದು ಬಹಳಷ್ಟು ಅನ್ಯಾಯಗಳು ನಡೆಯುತ್ತಿವೆ. ಆದರೆ ಅನ್ಯಾಯವನ್ನು ನೋಡಿದವರು ನೋದಂತೆ ವರ್ತಿಸುವುದು ಖೇದಕರ. ಬಾಬರಿ ಮಸೀದಿ ಧ್ವಂಸ ಮಾಡಿರುವವರಲ್ಲಿ ಧ್ವಂಸ ಮಾಡಿದ್ದು ತಪ್ಪು ಎಂದು ಅರಿವಾಗಿದೆ. ಆದರೆ ಅವರು ತಪ್ಪನ್ನು ಒಪ್ಪಲು ತಯಾರಿಲ್ಲ. ನಮ್ಮ ಚಟುವಟಿಕೆ ಹೀಗೆ ಮುಂದುವರಿದಲ್ಲಿ ಸಮಾಜ ಅಭಿವೃದ್ಧಿ ಯಾಗಲು ಹೇಗೆ ಸಾಧ್ಯ ಎಂದು ಅಲ್ ಇಂಡಿಯ ಇಮಾಮ್ ಕೌನ್ಸಿಲ್ ಜಿಲ್ಲಾ ಸಮಿತಿ ಸದಸ್ಯ ರಫೀಕ್ ದಾರಿಮಿ ಹೇಳಿದರು.
ಅವರು ಕೆ.ಸಿ ನಗರದಲ್ಲಿ ಸೋಮವಾರ ಸಂಜೆ ನಡೆದ ದ.ಕ. ಜಿಲ್ಲಾ ಅಲ್ ಇಂಡಿಯಾ ಇಮಾಮ್ ಕೌನ್ಸಿಲ್ ಇದರ ಆಶ್ರಯದಲ್ಲಿ ಹುಬ್ಬುರ್ರಸೂಲ್ ಪ್ರಯುಕ್ತ ಕೊನೆಯುಸಿರು ಇರುವವರೆಗೂ ವಿವಿದತೆಯಲ್ಲಿ ಏಕತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಲ್ ಇಂಡಿಯಾ ಇಮಾಮ್ ಕೌನ್ಸಿಲ್ ಕೇರಳ ಸದಸ್ಯ ಹಾಫಿಳ್ ಅಫ್ಝಲ್ ಕಾಸಿಮಿ ಕೊಲ್ಲಂ ಮಾತನಾಡಿ,ನಮಾಜು ಮಾತ್ರ ಮುಸ್ಲಮರಿಗೆ ಕಡ್ಡಾಯ ಮಾಡಿದ್ದಲ್ಲ. ಉಪವಾಸ, ಹಜ್ಜ್ ಕಾರ್ಯಕ್ರಮಗಳು ಇವೆ. ಇದಕ್ಕೆ ಅವಕಾಶ ಎಲ್ಲಡೆ ಸಿಗಬೇಕಾಗಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸುವ ಒಂದು ಬೆಳೆಯುತ್ತಿದೆ ಎಂದು ಹೇಳಿದರು.
ಮುಸ್ಲಿಮರಿಗೆ ಮಾತ್ರ ಗೌರವರ ಕೊಡಲು ಕಲ್ಪಿಸಿಲ್ಲ. ಹಿಂದೂ ಮುಸ್ಲಿಮರೆನ್ನದೆ ಏಕತೆಯ ಮನೋಭಾವನೆಯನ್ನು ಬೆಳೆಸಲು ಇಸ್ಲಾಂ ಪ್ರೋತ್ಸಾಹ ನೀಡುತ್ತದೆ. ಇದಕ್ಕೆ ಕಳಂಕ ತರಲೆಂದು ಸೃಷ್ಟಿಯಾಗಿರುವ ನಿರ್ದಿಷ್ಟ ಸಂಘಟನೆಗಳು ಬೆಳೆದಿದೆ. ಇದರಿಂದ ಏಕತೆಗೆ ಪ್ರಸಕ್ತ ಕಾಲದಲ್ಲಿ ಅಭೀವೃದ್ಧಿಗೆ ಧಕ್ಕೆಯಾಗುತ್ತಿದೆ ಎಂದರು.
ವೇದಿಕೆಯಲ್ಲಿ ಪಿಎಫೈ ಉಳ್ಳಾಲ ವಲಯ ಅಧ್ಯಕ್ಷ ಸಿ.ಟಿ. ಇಬ್ರಾಹಿಂ, ಪಿಎಫ್‌ಐ ಉಳ್ಳಾಲ ಡಿವಿಷನ್ ಅಧ್ಯಕ್ಷ ಅಬ್ಬಾಸ್ ಕಿನ್ಯಾ, ಅಜ್ಜಿನಡ್ಕ ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಅಹ್ಮದ್ ಅಜ್ಜಿನಡ್ಕ, ಉಚ್ಚಿಲ ಹಯಾತುಲ್ ಇಸ್ಲಾಂ ಮದ್ರಸ ಅಧ್ಯಕ್ಷ ಹನೀಫ್ ಎಸ್.ಬಿ. ತಲಪಾಡಿ ಮಸೀದಿಯ ಕಾರ್ಯದರ್ಶಿ ಅಬ್ದುಲ್ ಹಮೀದ್, ಹಿದಾಯತ್ ನಗರ ಮಸೀದಿ ಅಧ್ಯಕ್ಷ ಝಾಕೀರ್, ಇರ್ಶಾದ್ ಅಜ್ಜಿನಡ್ಕ, ಮೊಯಿದಿನ್ ಕುಟ್ಟಿ ತಲಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಫೈಝಲ್ ಅತಿಥಿಗಳನ್ನು ಸ್ವಾಗತಿಸಿ ಹಾರೀಸ್ ಮಲಾರ್ ವಂದಿಸಿದರು. ಝಿಯಾದ್ ಮಲಾರ್ ಕಾರ್ಯಕ್ರಮ ನಿರೂಪಿಸಿದರು.