ತೆಕ್ಕಿಲ್ ಶಾಲೆಯಲ್ಲಿ ಕಬಡ್ಡಿ ಪಂದ್ಯ ಉದ್ಘಾಟನೆ
ಸುಳ್ಯ, ೆ.22 ತೆಕ್ಕಿಲ್ ಮಾದರಿ ಹಿರಿಯ ಪ್ರಾಥಮಿಕ ಹಾಗೂ ಗೂನಡ್ಕ ಬೀಜದ ಕಟ್ಟೆ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ದಶಮಾನೋತ್ಸವದ ಅಂಗವಾಗಿ ಸಾರ್ವಜನಿಕ ಕಬಡ್ಡಿ ಮತ್ತು ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾಟವನ್ನು ನಿವೃತ್ತ ದೈಹಿಕ ಶಿಕ್ಷಕ ದೇವಯ್ಯ ಮಾಸ್ಟರ್ ಪೆತ್ತಾಜೆ ಉದ್ಘಾಟಿಸಿದರು. ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಟಿ.ಎಂ ಶಹೀದ್ ಅಧ್ಯಕ್ಷತೆ ವಹಿಸಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪ.ಪೂ. ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಕ ತುಕರಾಮ್ ಏನೆಕ್ಕಲ್ ಮುಖ್ಯ ಅತಿಥಿಯಾಗಿದ್ದರು.
ವೇದಿಕೆಯಲ್ಲಿ ದಶಮಾನೋತ್ಸವ ಸಮಿತಿ ಅಧ್ಯಕ್ಷ ಯು.ಕೆ ತೀರ್ಥರಾಮ ಉಳುವಾರು, ಕ್ರೀಡಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಸಂಪಾಜೆ, ಪ್ರತಿಷ್ಠಾನದ ಕಾರ್ಯ ದರ್ಶಿ ಅಶ್ರ್ ಗುಂಡಿ, ಮನರಂಜನಾ ಸಮಿತಿ ಅಧ್ಯಕ್ಷ ಕಿಶೋರ್ ಕಲ್ಲುಗುಂಡಿ, ಆರ್ಥಿಕ ಸಮಿತಿ ಅಧ್ಯಕ್ಷ ದಿನಕರ ಕರಾ, ಬಹುಮಾನದ ಪ್ರಾಯೋಜಕರಾದ ಸೋಮಶೇಖರ ಪೈಕ, ರಾಮಚಂದ್ರ ಕಲ್ಲುಗದ್ದೆ, ಮುರಳೀಧರ ಬಾಳಿಲ, ಸೀಲು ಅರಂತೋಡು, ರಝಾಕ್ ಕೆ., ವಿಜಯಾನಂದ .ಕೆ.ಜಿ., ಮುಖ್ಯ ಶಿಕ್ಷಕ ದಾಮೋದರ ಮಾಸ್ಟರ್, ದೈಹಿಕ ಶಿಕ್ಷಕರಾದ ತೀರ್ಥರಾಮ ಅಡ್ಕಪಳೆ, ಧನಂಜಯ ಮೇರ್ಕಜೆ, ರಮ್ಯಾ ಎಳ್ಪಕಜೆ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಹರಿಣಾಕ್ಷಿ ಸ್ವಾಗತಿಸಿದರು. ಸಹ ಶಿಕ್ಷಕಿ ಲೋಕೇಶ್ವರಿ ವಂದಿಸಿದರು. ಶಿಕ್ಷಕಿಯರಾದ ಧನ್ಯಾ, ರೇಖಾ ಕಾರ್ಯಕ್ರಮ ನಿರೂಪಿಸಿದರು.