×
Ad

ಪುತ್ತೂರು ತಾಪಂ ಆಡಳಿತ ಈ ಬಾರಿಯೂ ಬಿಜೆಪಿ ತೆಕ್ಕೆಗೆ

Update: 2016-02-23 13:24 IST

ಪುತ್ತೂರು,ಫೆ.23: ಪುತ್ತೂರು ತಾಲೂಕು ಪಂಚಾಯತ್ ಆಡಳಿತ ಚುಕ್ಕಾಣಿ ಈ ಬಾರಿಯೂ ಬಿಜೆಪಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಒಟ್ಟು 24 ಕ್ಷೇತ್ರಗಳಲ್ಲಿ 16 ಕ್ಷೇತ್ರಗಳಲ್ಲಿ ಬಿಜೆಪಿ, 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿವೆ. ಇದರೊಂದಿಗೆ ಬಹುಮತ ಸಾಧಿಸಿರುವ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಕೋಡಿಂಬಾಡಿ, ಬಜತ್ತೂರು, ಉಪ್ಪಿನಂಗಡಿ, ರಾಮಕುಂಜ, ಗೋಳಿತ್ತೊಟ್ಟು, ಬೆಟ್ಟಂಪಾಡಿ, ಕೆಯ್ಯೂರು, ಅರಿಯಡ್ಕ, ಸರ್ವೆ, ಕಬಕ, ಆಲಂಕಾರು, ಆರ್ಯಾಪು, ಸವಣೂರು, ಚಾರ್ವಾಕ, ಒಳಮೊಗ್ರು, ಐತ್ತೂರು ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಿದರೆ, ನೆಲ್ಯಾಡಿ, ಕುಟ್ರುಪ್ಪಾಡಿ, ಕೊಳ್ತಿಗೆ, ನೆಟ್ಟಣಿಗೆ ಮುಡ್ನೂರು, ಕಡಬ, ಬಿಳಿನೆಲೆ, ಕೌಕ್ರಾಡಿ, ನರಿಮೊಗರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಕಳೆದ ಬಾರಿ 22 ಕ್ಷೇತ್ರಗಳಲ್ಲಿ ಬಿಜೆಪಿ 17, ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಈ ಬಾರಿ ಕೆಯ್ಯೂರು ಮತ್ತು ಗೋಳಿತ್ತೊಟ್ಟು ಎರಡು ಕ್ಷೇತ್ರಗಳು ತಾ.ಪಂ. ಗೆ ಸೇರ್ಪಡೆಗೊಂಡಿದ್ದು, ಎರಡರಲ್ಲೂ ಬಿಜೆಪಿ ಜಯಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News