×
Ad

ಜಿಪಂ ಚುನಾವಣೆ: ಪುತ್ತೂರು ತಾಲೂಕಿನಲ್ಲಿ ಸಮಬಲ ಸಾಧಿಸಿಕೊಂಡ ಕಾಂಗ್ರೆಸ್, ಬಿಜೆಪಿ

Update: 2016-02-23 13:32 IST

ಪುತ್ತೂರು,ಫೆ.23: ದ.ಕ. ಜಿಲ್ಲಾ ಪಂಚಾಯತ್ ಆಡಳಿತಕ್ಕೆ ನಡೆದಿರುವ ಚುನಾವಣೆಯಲ್ಲಿ ಪುತ್ತೂರು ತಾಲೂಕಿನ 6 ಜಿಪಂ. ಕ್ಷೇತ್ರಗಳಲ್ಲಿ ಕಾಂಗ್ರೆಸ್ 3 ಹಾಗೂ ಬಿಜೆಪಿ 3 ಸ್ಥಾನಗಳನ್ನು ಗಳಿಸಿಕೊಳ್ಳುವುದರ ಜೊತೆಗೆ ಸಮಬಲ ಸಾಧಿಸಿವೆ. ರಾಜಕೀಯ ಒಳ ಆಟದಿಂದ ಜಿದ್ದಾಜಿದ್ದಿನ ಹಾಗೂ ಕುತೂಹಲಭರಿತ ಕ್ಷೇತ್ರಗಳಾಗಿದ್ದ ನೆಟ್ಟಣಿಗೆ ಮುಡ್ನೂರು ಹಾಗೂ ನೆಲ್ಯಾಡಿ ಕ್ಷೇತ್ರಗಳಲ್ಲಿ ಎರಡೂ ಕ್ಷೇತ್ರಗಳನ್ನೂ ಕಾಂಗ್ರೆಸ್ ಬಾಚಿಕೊಂಡಿದೆ. ಈ ಹಿಂದಿನ ಅವಧಿಯಲ್ಲಿ 6 ಕ್ಷೇತ್ರಗಳಲ್ಲಿ 5 ಬಿಜೆಪಿ ಹಾಗೂ 1 ಕಾಂಗ್ರೆಸ್ ಸ್ಥಾನ ಪಡೆದಿದ್ದವು. ಈ ಬಾರಿ ಮತದಾರ ಎಲ್ಲರಾಜಕೀಯ ಲೆಕ್ಕಾಚಾರವನ್ನು ತಿರುವಿ ಹಾಕಿದ್ದಾನೆ. ಪ್ರತಿಷ್ಠಿತೆಯ ಕಣವಾಗಿದ್ದ ನೆಟ್ಟಣಿಗೆ ಮುಡ್ನೂರು ಕ್ಷೇತ್ರ ಈ ಬಾರಿ ಕಾಂಗ್ರೆಸ್‌ನ ಅನಿತಾ ಹೇಮನಾಥ ಶೆಟ್ಟಿಯವರ ಪಾಲಾಗಿದೆ. ಬಿಜೆಪಿ ತೆಕ್ಕೆಯಲ್ಲಿದ್ದ ಕಡಬ ಕ್ಷೇತ್ರವೂ ಈ ಬಾರಿ ಕಾಂಗ್ರೆಸ್ ಕೈ ಸೇರಿದೆ. ಬಿಜೆಪಿ ಭದ್ರಕೋಟೆಯಾಗಿದ್ದ ನೆಲ್ಯಾಡಿ ಕ್ಷೇತ್ರ ಬಂಡಾಯ ಅಭ್ಯರ್ಥಿಗಳ ಮೇಳೈಸುವಿಕೆಯಿಂದ ಈ ಬಾರಿ ಲೆಕ್ಕಾಚಾರ ತಿರುಚಿಕೊಂಡು 35 ಅಲ್ಪ ಮತಗಳ ಅಂತರದಿಂದ ಕಾಂಗ್ರೆಸ್ ಕೈ ಸೇರಿದೆ. ಇನ್ನು ಉಪ್ಪಿನಂಗಡಿ, ಪಾಣಾಜೆ ಹಾಗೂ ಬೆಳಂದೂರು ಕ್ಷೇತ್ರಗಳು ಬಿಜೆಪಿ ಪಾಳಯದಲ್ಲೇ ಉಳಿದುಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News