ಪುತ್ತೂರು ಜಿ.ಪಂನಲ್ಲಿ ಸಮಬಲ, ತಾಪಂ ಮತ್ತೆ ಬಿಜೆಪಿ ತೆಕ್ಕೆಗೆ
ಪುತ್ತೂರು,ಫೆ.23: ಪುತ್ತೂರು ತಾಲೂಕಿನ 6 ಜಿ.ಪಂ. ಕ್ಷೇತ್ರಗಳಲ್ಲಿ ಕಾಂಗ್ರೆಸ್ 3 ಹಾಗೂ ಬಿಜೆಪಿ 3 ಸ್ಥಾನಗಳನ್ನು ಗಳಿಸಿಕೊಳ್ಳುವುದರ ಜೊತೆಗೆ ಸಮಬಲ ಸಾಧಿಸಿವೆ. ರಾಜಕೀಯ ಒಳ ಆಟದಿಂದ ಜಿದ್ದಾಜಿದ್ದಿನ ಹಾಗೂ ಕುತೂಹಲ ಭರಿತ ಕ್ಷೇತ್ರಗಳಾಗಿದ್ದ ನೆಟ್ಟಣಿಗೆ ಮುಡ್ನೂರು ಹಾಗೂ ನೆಲ್ಯಾಡಿ ಕ್ಷೇತ್ರಗಳಲ್ಲಿ ಎರಡೂ ಕ್ಷೇತ್ರಗಳನ್ನೂ ಕಾಂಗ್ರೆಸ್ ಬಾಚಿಕೊಂಡಿದೆ. ಈ ಹಿಂದಿನ ಅವಧಿಯಲ್ಲಿ 6 ಕ್ಷೇತ್ರಗಳಲ್ಲಿ 5 ಬಿಜೆಪಿ ಹಾಗೂ 1 ಕಾಂಗ್ರೆಸ್ ಸ್ಥಾನ ಪಡೆದಿದ್ದವು. ಪ್ರತಿಷ್ಠಯ ಕಣವಾಗಿದ್ದ ನೆಟ್ಟಣಿಗೆ ಮುಡ್ನೂರು ಕ್ಷೇತ್ರ ಈ ಬಾರಿ ಕಾಂಗ್ರೆಸ್‌ನ ಅನಿತಾ ಹೇಮನಾಥ ಶೆಟ್ಟಿಯವರ ಪಾಲಾಗಿದೆ. ಬಿಜೆಪಿ ತೆಕ್ಕೆಯಲ್ಲಿದ್ದ ಕಡಬ ಕ್ಷೇತ್ರವೂ ಈ ಬಾರಿ ಕಾಂಗ್ರೆಸ್ ಕೈ ಸೇರಿದೆ. ಬಿಜೆಪಿ ಭದ್ರಸ್ಥಾನವಾಗಿದ್ದ ನೆಲ್ಯಾಡಿ ಕ್ಷೇತ್ರ ಬಂಡಾಯ ಅಭ್ಯರ್ಥಿಗಳ ಮೇಳೈಸುವಿಕೆಯಿಂದ ಈ ಬಾರಿ ಲೆಕ್ಕಾಚಾರ ತಿರುಚಿಕೊಂಡು 34 ಅಲ್ಪ ಮತಗಳ ಅಂತರದಿಂದ ಕಾಂಗ್ರೆಸ್ ಕೈ ಸೇರಿದೆ. ಉಪ್ಪಿನಂಗಡಿ, ಪಾಣಾಜೆ ಹಾಗೂ ಬೆಳಂದೂರು ಕ್ಷೇತ್ರಗಳು ಬಿಜೆಪಿ ಪಾಳಯ ಉಳಿಸಿಕೊಂಡಿವೆ.
ಪುತ್ತೂರು ತಾಲೂಕು ಪಂಚಾಯತ್‌ನ ಆಡಳಿತ ಚುಕ್ಕಾಣಿ ಈ ಬಾರಿಯೂ ಬಿಜೆಪಿ ಪಾಲಾಗಿದೆ. ಇಲ್ಲಿನ ಒಟ್ಟು 24 ಕ್ಷೇತ್ರಗಳಲ್ಲಿ ಬಿಜೆಪಿ 16 ಮತ್ತು ಕಾಂಗ್ರೆಸ್ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕೋಡಿಂಬಾಡಿ, ಬಜತ್ತುರು, ಉಪ್ಪಿನಂಗಡಿ, ರಾಮಕುಂಜ, ಗೋಳಿತೊಟ್ಟು, ಬೆಟ್ಟಂಪಾಡಿ, ಕೆಯ್ಯೂರು, ಅರಿಯಡ್ಕ, ಸರ್ವೇ, ಕಬಕ, ಆಲಂಕಾರು, ಆರ್ಯಾಪು, ಸವಣೂರು, ಚಾರ್ವಾಕ, ಒಳಮೊಗ್ರು, ಐತ್ತೂರು ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ನೆಲ್ಯಾಡಿ, ಕುಟ್ರುಪ್ಪಾಡಿ, ಕೊಳ್ತಿಗೆ, ನೆಟ್ಟಣಿಗೆ ಮುಡ್ನೂರು, ಕಡಬ, ಬಿಳಿನೆಲೆ, ಕೌಕ್ರಾಡಿ ಮತ್ತು ನರಿಮೊಗರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಜಿ.ಪಂ. ಕ್ಷೇತ್ರ
ಉಪ್ಪಿನಂಗಡಿ ಕ್ಷೇತ್ರ: ಶಯನಾ ಜಯಾನಂದ(ಬಿಜೆಪಿ)12,893, ಅನಿತಾ ಕೇಶವ ಗೌಡ(ಕಾಂಗ್ರೆಸ್)10,168, ಗೆಲುವಿನ ಅಂತರ2,725
ಕಡಬ ಕ್ಷೇತ್ರ: ಪಿ.ಪಿ. ವರ್ಗೀಸ್(ಕಾಂಗ್ರೆಸ್) 10,001, ಕೃಷ್ಣ ಶೆಟ್ಟಿ(ಬಿಜೆಪಿ)9,785, ಸೈಯದ್ ಮೀರಾ ಸಾಹೇಬ್(ಜೆಡಿಎಸ್)1,505, ಗಣಪಯ್ಯ ಗೌಡ(ಪಕ್ಷೇತರ)854, ಮಹಾವೀರ ಜೈನ್(ಪಕ್ಷೇತರ) 177, ಗೆಲುವಿನ ಅಂತರ 216
ನೆಲ್ಯಾಡಿ ಕ್ಷೇತ್ರ: ಸರ್ವೋತ್ತಮ ಗೌಡ(ಕಾಂಗ್ರೆಸ್)7,411, ಬಾಲಕೃಷ್ಣ ಬಾಣಜಾಲು(ಬಿಜೆಪಿ)7,387, ನಝೀರ್ ಖಾನ್(ಜೆಡಿಎಸ್)181, ಧನಂಜಯ ಕೊಡಂಗೆ(ಪಕ್ಷೇತರ)2,844. ಗೆಲುವಿನ ಅಂತರ 24
ಬೆಳಂದೂರು ಕ್ಷೇತ್ರ: ಪ್ರಮೀಳಾ ಜನಾರ್ಧನ(ಬಿಜೆಪಿ), 9,305, ಸತೀಶ್ ಕುಮಾರ್ ಕಡೆಂಜಿ(ಬಿಜೆಪಿ) 6,816, ಗೆಲುವಿನ ಅಂತರ 2489.
ಪಾಣಾಜೆ ಕ್ಷೇತ್ರ: ಮೀನಾಕ್ಷಿ ಶಾಂತಿಗೋಡು(ಬಿಜೆಪಿ) 13,393, ಪವಿತ್ರಾ ಬಾಬು(ಕಾಂಗ್ರೆಸ್) 11,367, ಯಶೋದಾ(ಎಸ್‌ಡಿಪಿಐ) 1011, ಭಾರತಿ(ಬಿಎಸ್‌ಪಿ) 321. ಗೆಲುವಿನ ಅಂತರ 2026. 6.ನೆಟ್ಟಣಿಗೆ ಮುಡ್ನೂರು: ಅನಿತಾ ಹೇಮನಾಥ ಶೆಟ್ಟಿ(ಕಾಂಗ್ರೆಸ್)11,260 ವೀಣಾ ಆರ್ ರೈ ಬೆದ್ರುಮಾರ್(ಬಿಜೆಪಿ)10,240, ಗೆಲುವಿನ ಅಂತರ 1,020