×
Ad

ಭಾರತ ಜಗತ್ತಿನ ಅತೀದೊಡ್ಡ ಆಯುಧ ಖರೀದಿಸುವ ರಾಷ್ಟ್ರ!

Update: 2016-02-23 15:11 IST

ಹೊಸದಿಲ್ಲಿ: ಭಾರತ ಮತ್ತೊಮ್ಮೆ ಜಗತ್ತಿನಲ್ಲೇ ಅತೀ ಹೆಚ್ಚು ಶಸ್ತ್ರಾಸ್ತ್ರ ಖರೀದಿಸುವ ರಾಷ್ಟ್ರವೆನಿಸಿಕೊಂಡಿದೆ. ರಷ್ಯಾ ಅತೀ ದೊಡ್ಡ ರಫ್ತುದಾರ ಆಗಿದೆ. ಭಾರತದ ಶೇ. 70ರಷ್ಟು ಮಾರುಕಟ್ಟೆ ಅದರ ವಶದಲ್ಲಿದೆ. ಸ್ಟಾಕ್‌ಹೋಮ್‌ನ ಒಂದು ಥಿಂಕ್ ಟ್ಯಾಂಕ್ ಜಗತ್ತಿನಲ್ಲಿ ಭಾರತ ಶೇ. 14ಷ್ಟು ಶಸ್ತ್ರಾಸ್ತ್ರಗಳನ್ನು ತರಿಸಿಕೊಳ್ಳುತ್ತಿದೆ. ಕುತೂಹಲದ್ದೆಂದರೆ 2011-15ರಲ್ಲಿ ಹತ್ತು ಶಸ್ತ್ರಾಸ್ತ್ರ ಆಮದು ಮಾಡಿಕೊಂಡ ದೇಶಗಳಲ್ಲಿ ಆರು ದೇಶಗಳು ಏಷ್ಯದ್ದಾಗಿವೆ. ವಿಶ್ವದ ಶೇ. 14ರಷ್ಟು ಆಯಾತದೊಂದಿಗೆ ಭಾರತದ ಮೊದಲನೆ ಸ್ಥಾನದಲ್ಲಿ. ಚೀನ ಶೇ.3.6 ಪಾಲು, ಆಸ್ಟ್ರೇಲಿಯ ಶೆ.3.3 ರಷ್ಟು ಆಯುಧಗಳನ್ನು ಆಯಾತ ಮಾಡಿಕೊಂಡ ರಾಷ್ಟ್ರಗಳಾಗಿವೆ. ಅದೇವೇಳೆ ಪಾಕಿಸ್ಥಾನ ನಾಲ್ಕನೆ ಸ್ಥಾನದಲ್ಲಿದೆ. ದೊಡ್ಡ ಪ್ರಮಾಣದಲ್ಲಿ ಸಶ್ತ್ರಾಸ್ತ್ರಗಳನ್ನು ಖರೀದಿಸುವುದರಿಂದಾಗಿ ಶಸ್ತ್ರಾಸ್ತ್ರ ಉದ್ಯೋಗ ಈವರೆಗೂ ಸ್ವದೇಶಿ ವಿಭಾಗದ ಶಸ್ತ್ರಾಸ್ತ್ರ ನಿರ್ಮಾಣ ಸಾಧ್ಯವಾಗಿಲ್ಲ ವೆಂದು ಥಿಂಕ್‌ಟ್ಯಾಂಕ್ ಹೇಳಿದೆ.


 ಅಮೆರಿಕ ಭಾರತಕ್ಕೆ ಶಸ್ತ್ರ ರಫ್ತು ಮಾಡುವ ರಾಷ್ಟ್ರವಾಗುತ್ತಿರುವುದು ಇತ್ತೀಚೆಗಿನ ಹೊಸ ಬೆಳವಣಿಗೆಯಾಗಿದೆ. ಅಮೆರಿಕ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ ದೇಶವಾಗಿದೆ. ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ತನ್ನ ವರದಿಯಲ್ಲಿ 2006-10ರಿಂದ 2011-15ಕ್ಕೆ ಹೋಲಿಸಿದರೆ ಶಸ್ತ್ರ ಖರೀದಿಸುವ ಪ್ರಕರಣಗಳಲ್ಲಿಇ ಶೆ.90ರಷ್ಟು ಹೆಚ್ಚಿವೆ. 2013,14,15ರಲ್ಲಿ ಭಾರತ ಜಗತ್ತಿನ ಅತಿದೊಡ್ಡ ಶಸ್ತ್ರಾಸ್ತ್ರ ತರಿಸಿಕೊಂಡಿರುವ ರಾಷ್ಟ್ರವಾಗಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News