ಕೇರಳ ಕೆಸ್ಸಾರ್ಟಿಸಿ ಕಂಡಕ್ಟರ್ ರಾತ್ರಿವೇಳೆ ಪ್ರಯಾಣಿಕ ಹೇಳಿದಲ್ಲಿ ಬಸ್ ನಿಲ್ಲಿಸದ್ದಕ್ಕೆ ದಂಡ!
ಕೇರಳ:.ರಾತ್ರಿ ಸಮಯದಲ್ಲಿ ಜನರು ಹೇಳುವ ಸ್ಟಾಫ್‌ನಲ್ಲಿ ಬಸ್ ನಿಲ್ಲಿಸಬೇಕೆಂದು ಕಾನೂನಿದ್ದರು ಹಲವರು ಅದನ್ನು ಪಾಲಿಸುವುದಿಲ್ಲ. ಎಲ್ಲೆಲ್ಲಿ ಇಳಿಸಿದರೆ ಪ್ರಯಾಣಿಕರು ಅನುಭವಿಸು ಕಷ್ಟಗಳು ಕಡಿಮೆಯೇನಲ್ಲ. ಇದಕ್ಕೆ ಸಾಂತ್ವನವೆಂಬಂತೆ ಕೇರಳದ ಬಳಕೆದಾರರ ಜಸ್ಟಿಸ್ ಫಾರಂ ತೀರ್ಪು ನೀಡಿದೆ. ರಾತ್ರಿಯಲ್ಲಿ ವಿನಂತಿಸಿಕೊಂಡರೂ ಹೇಳಿದ ಸ್ಟಾಫ್‌ನಲ್ಲಿ ನಿಲ್ಲಿಸದಿದ್ದ ಕೇರಳದ ಕೆಎಸ್ಸಾರ್ಟಿಸಿ ಬಸ್‌ವೊಂದರ ವಿರುದ್ಧ ನೀಡಿದ ದೂರಿನಲ್ಲ ಬಳಕೆದಾರರ ವೇದಿಕೆ ಮಧ್ಯಪ್ರವೇಶಿಸಿದ್ದರಿಂದ ಪ್ರಯಾಣಿಕನಿಗೆ ನಷ್ಟಪರಿಹಾರ ನೀಡಲಾಗಿದೆ. ಕೀಯಕ್ಕೇಂಚೇರಿ ಇಳವ ಪಾಡಂ ಪದಿಯನ್ ಮನೆಯ ಬೆನ್ನಿವರ್ಗೀಸ್‌ರ ದೂರನ್ನು ಆಲತ್ತೂರ್ ಫಾರಂ ಫಾರ್ ಕನ್ಸ್ಯೂಮರ್ ಜಸ್ಟಿಸ್ ಕಳಿಸಿದ ನೋಟಿಸಿನ ಮೂಲಕ ವಿವಾದ ಪರಿಹಾರಗೊಂಡಿದೆ.
ಪಾಲಕ್ಕಾಡ್‌ನಿಂದ ರಾತ್ರಿ ವಡಕ್ಕಂಚೇರಿಗೆ ಪ್ರಯಾಣಿಸುತ್ತಿದ್ದ ಬೆನ್ನಿವರ್ಗೀಸ್‌ರನ್ನು ಮಂಗಲಪಾಲಂ ಸ್ಟಾಪ್‌ನಲ್ಲಿ ಇಳಿಸಬೇಕೆಂದು ಹೇಳಿದಾಗ ಕಂಡಕ್ಟರ್‌ಅದಕ್ಕೆ ಸಮ್ಮತಿಸದೆ ಚೆರುಪುಷ್ಪಂ ಸ್ಟಾಪ್‌ನಲ್ಲಿ ಇಳಿಸಿದ್ದ. ಮಂಗಲಪಾಲಂನಲ್ಲಿ ಇಳಿಸಿದ್ದರೆ ವಂಡಾಯಿ ಮಾರ್ಗದ ಬಸ್‌ನಲ್ಲಿ ಪ್ರಯಾಣ ಮುಂದುವರಿಸಲು ಸಾಧ್ಯವಿತ್ತು ಎಂದುಬೆನ್ನಿವರ್ಗೀಸ್ ದೂರು ನೀಡಿದ್ದರು. ಹೇಳಿದ ಸ್ಟಾಪ್‌ನಲ್ಲಿ ಇಳಿಸದ್ದರಿಂದ ಆಟೊ ರಿಕ್ಷಾ ಮೂಲಕ 120ರೂಪಾಯಿ ಹಾಗೂ ದೂರು ನೀಡಲು ತಗಲಿದ ವೆಚ್ಚ 100 ರೂಪಾಯಿ ಸೇರಿ220ರೂಪಾಯಿ ದಂಡವನ್ನು ಕಂಡಕ್ಟರ್‌ನಿಗೆ ವಿಧಿಸಲಾಯಿತು. ಈ ಹಣ ಬೆನ್ನಿವರ್ಗೀಸ್‌ರಿಗೆ ಮನಿಆರ್ಡರ್ ಕಳುಹಿಸಲಾಗಿದೆ.